
ಚಡಚಣ:ಜೂ.22:ಮಾದಕ ದ್ರವ್ಯಗಳ ಸೇವನೆಯ ಕೆಟ್ಟ ಪರಿಣಾಮಗಳನ್ನು ಅರಿತುಕೊಂಡು ವಿದ್ಯಾರ್ಥಿಗಳು ಅವುಗಳಿಂದ ದೂರವಿರಬೇಕು ಎಂದು ಚಡಚಣ ಠಾಣೆಯ ಎಸೈ ಪ್ರವೀಣ ಗರೇಬಾಳ ಹೇಳಿದರು.
ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಚಡಚಣ ಪೊಲೀಸ ಠಾಣೆ ಮತ್ತು ಸಂಗಮೇಶ್ವರ ಪಿಯು ಮಹಾವಿದ್ಯಾಲಯಗಳ ಆಶ್ರಯದಲ್ಲಿ ಹಮ್ಮಿಕೊಂಡ ಮಾದಕ ವಸ್ತುಗಳ ನಿಷೇದ ಕುರಿತು ಜಾಗ್ರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತಗಳ ಸೇವನೆ ಇಂದು ಯುವ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಮಾದಕ ದ್ರವ್ಯ ಸೇವನೆ ಅನೇಕ ಅಪರಾಧಗಳಿಗೆ ಕಾರಣವಾಗುತ್ತಿದ್ದು ಯುವ ಜನತೆ ಇದರಿಂದ ದೂರು ಇರಬೇಕೆಂದು ಅವರು ಹೇಳಿದರು.
ಮಾದಕ ದ್ರವ್ಯ ಸೇವೆನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಜೀವಶಾಸ್ತ್ರ ಉಪನ್ಯಾಸಕ ಕೆ.ಮಹೇಶ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕøತಿಕ ವಿಭಾಗದ ಮುಖ್ಯಸ್ಥರಾದ ಉಪನ್ಯಾಸಕ ಶಶಿಧರ ಕುಸೂರ, ಬಿ.ಎಸ್.ಅಂಡಗಿ, ಬಾಲವರ್ಧನ ರೆಡ್ಡಿ, ಶ್ರೀಶೈಲ ಕಾಮಗೊಂಡ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ ಅಂಕದ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಅರಳಿಕಟ್ಟಿ ವಂದಿಸಿದರು.