ಡಾ. ವಿಶಾಲ ಹೆಬ್ಬಾಳೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ 144ನೇ ರ್ಯಾಂಕ್

ಬೀದರ್, ಅ. 18:ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಡಾ. ವಿಶಾಲ ಹೆಬ್ಬಾಳೆ ಅವರು ಕೇಂದ್ರ ಸರ್ಕಾರದ ಐಸಿಎಆರ್ ಪಿಜಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 144ನೇ ರ್ಯಾಂಕ್ ಗಳಿಸಿ ರಾಜ್ಯ ಮತ್ತು ಬೀದರ್ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಪೆÇ್ರ. ಜಗನ್ನಾಥ ಹೆಬ್ಬಾಳೆ ಹಾಗೂ ಡಾ. ಸಾವಿತ್ರಿ ಹೆಬ್ಬಾಳೆ ಅವರ ಕಿರಿಯ ಪುತ್ರರಾಗಿರುವ ಡಾ. ವಿಶಾಲ ಹೆಬ್ಬಾಳೆ ಅವರು ಪಶುವೈದ್ಯಕೀಯ ಮತ್ತು ಪಶುಸಂಗೋಪನೆ ವಿಜ್ಞಾನ ಪದವಿಯಲ್ಲಿ 80 ಶೇಕಡಾ ಅಂಕಗಳೊಂದಿಗೆ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಡಾ. ಹೆಬ್ಬಾಳೆ ಅವರು ವೆಟರಿನರಿ ಸರ್ಜರಿ ಮತ್ತು ರೆಡಿಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಉದ್ದೇಶ ಹೊಂದಿದ್ದಾರೆ.

ಅವರ ಸಾಧನೆಗೆ ಕರ್ನಾಟಕ ಜಾನಪದ ಪರಿಷತ್ ಬೀದರ್ ಜಿಲ್ಲಾ ಘಟಕದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ತಿಳಿಸಿದ್ದಾರೆ.