ಡಾ.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಣೆ

ಅಥಣಿ : ಡಿ.೮:ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಭಾರತಕ್ಕೆ ನೀಡಿದ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರು ಎಲ್ಲ ಸಮುದಾಯಗಳ ಶ್ರೇಯಸ್ಸಿಗೆ ಶ್ರಮಿಸಿದವರು ಎಲ್ಲ ಸಮುದಾಯದವರು ಒಗ್ಗೂಡಿ ಅವರ ಜಯಂತಿ ಮತ್ತು ನಿರ್ವಾಣ ದಿನಗಳನ್ನು ಆಚರಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು ಹೇಳಿದರು.
ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಇತಿಹಾಸವನ್ನು ಅರಿತವರೇ ಇತಿಹಾಸವನ್ನು ನಿರ್ಮಿಸುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹಾತ್ಮರ ಚರಿತ್ರೆಗಳನ್ನು ನಾವು ಓದಿ, ಅರ್ಥಮಾಡಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಬೇಕು” ಎಂದು ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ಅವರ ವಾರ್ಡ್ ನಂ.೨ ರಲ್ಲಿ ನಿರ್ಮಿಸಿದ ಸಿದ್ದಾರ್ಥ ನಗರ ದ್ವಾರ ಬಾಗಿಲನ್ನು ಉದ್ಘಾಟಿಸಿದರು.
ಈ ವೇಳೆ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಗೆ ಅಧಿಕಾರಿಗಳು. ಗಣ್ಯರು ಪುಷ್ಪ ನಮನ ಹಾಗೂ ಮೇಣದ ಬತ್ತಿಗಳನ್ನು ಹಚ್ಚಿ ನಮನ ಸಲ್ಲಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಶೀವಲಿಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸದಸ್ಯರಾದ ಕಲ್ಲೇಶ ಮಡ್ಡಿ, ರಾಜು ಗುಡೊಡಗಿ, ಮಲ್ಲೇಶ ಹುದ್ದಾರ, ಸೈಯ್ಯದಅಮೀನ್ ಗದ್ಯಾಳ. ವಿಲಿನರಾಜ ಯಳಮಲ್ಲೆ, ಮುಸ್ತಾಕ ಮುಲ್ಲಾ. ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಚಂದ್ರಕಾAತ ಕಾಂಬಳೆ, ರಾಜಶೇಖರ ಹೀರೆಮನಿ, ಮುಖಂಡರಾದ ಶಶಿಕಾಂತ ಸಾಳವೆ, ಮಂಜು ಬಜಂತ್ರಿ, ಮಯೂರ ಸಿಂಗೆ. ಶಂಕರ ಹೀರೆಮನಿ, ಕಫೀಲ ಘಟಕಾಂಬಳೆ, ಮಹಾಂತೇಶ ಬನಸೋಡೆ, ವಿಕಾಸ ಘಟಕಾಂಬಳೆ, ರಾಕೇಶ್ ಪಟ್ಟಣ, ಚಂದ್ರು ಘಟಕಾಂಬಳೆ, ಹಾಗೂ ಅನೇಕರು ಉಪಸ್ಥಿತರಿದ್ದರು.