
ನವದೆಹಲಿ,ಫೆ.೬- ದೇಶದಲ್ಲಿ ಮೊಬೈಲ್ ಡೇಟಾ ಅಗ್ಗದ ದರದಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೆ ಇಂಟರ್‌ನಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ, ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಶಿಕ್ಷಣ ಮಕ್ಕಳಿಗೆ ಹೊರೆ ಎನಿಸಬಾರದು, ಅರೆಮನಸ್ಸಿನಿಂದ ಕಲಿತರೆ ವಿದ್ಯೆ ತಲೆಗೆ ಹತ್ತುವುದಿಲ್ಲ. ಆಸಕ್ತಿಯಿಲ್ಲದಿದ್ದರೆ ಶಿಕ್ಷಣ ಜೀವನವನ್ನು ಯಶಸ್ವಿಗೊಳಿಸುವುದಿಲ್ಲವಾದ್ದರಿಂದ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ದೆಹಲಿಯ ತಮ್ಮ ನಿವಾಸದಲ್ಲಿ ದೇಶದ ಹಲವು ರಾಜ್ಯಗಳಿಂದ ಬಂದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ
ಹಿಂದಿನದನ್ನು ಎಣಿಸುವುದಿಲ್ಲ. ಮುಂದೆ ಉಳಿದಿರುವ ಸಮಯ ಎಣಿಸುತ್ತೇನೆ.ನಿಮಗೂ ಅದನ್ನೇ ಹೇಳುತ್ತೇನೆ, ಹಿಂದಿನದನ್ನು ಯೋಚಿಸಬೇಡಿ. ನಿಮ್ಮಮುಂದೆ ಇರುವುದನ್ನು ಬದುಕಲು ಪ್ರಯತ್ನಿಸಿ” ಎಂದು ಹೇಳಿದ್ದಾರೆ
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ನಮ್ಮ ಗುರಿ ತಲುಪಬಹುದಾದದ್ದಾಗಿರಬೇಕು, ಹಾಗೆಂದು ಸುಲಭವಾಗಿ ಸಾಧಿಸಲಾಗದಂತಿರಬೇಕು. ಮನಸ್ಸನ್ನು ಪಳಗಿಸಿ, ಮನಸ್ಸಿನ ಜೊತೆ ಸಂಪರ್ಕ ಹೊಂದಿ, ನೀವು ಅಧ್ಯಯನ ಮಾಡಲು ಅಗತ್ಯವಿರುವ ವಿಷಯಗಳನ್ನು ಇಟ್ಟುಕೊಳ್ಳಿ. ಆಗ ನೀವು ಯಾವಾಗಲೂ ಯಶಸ್ಸನ್ನು ಕಾಣುವಿರಿ” ಎಂದು ತಿಳಿಸಿದ್ದಾರೆ.
ಮೊಬೈಲ್ ನಲ್ಲಿ ಗೇಮ್ಸ್ ಆಡಲು ಖುಷಿಯಾಗಬಹುದು, ಆದರೆ ಈಗ ಪರೀಕ್ಷಾ ಸಮಯ, ಅಗ್ಗದ ದರದಲ್ಲಿ ಡೇಟಾ ಸಿಗುತ್ತದೆ ಎಂಬ ಕಾರಣಕ್ಕೆ ಸಮಯ ಕಳೆಯಲು ಅದರಲ್ಲಿ ತೊಡಗಿಕೊಳ್ಳಬೇಡಿ. ಮೋಜಿಗಾಗಿ ಅದನ್ನು ಮಾಡಬೇಡಿ. ಹಣಕ್ಕಾಗಿ ಆನ್ ಲೈನ್ ಗೇಮ್ಸ್ ನಲ್ಲಿ ತೊಡಗಿಸಿಕೊಳ್ಳುವವರು ಹಾಳಾಗುತ್ತಾರೆ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಎತ್ತಿ ತೋರಿಸಿದ ಅವರು . ವಿದ್ಯಾರ್ಥಿಗಳು ಎಐ ಅನ್ನು ಬಳಸಬೇಕಾದರೂ, ಅದು ಯಾವಾಗಲೂ ಅವರ ಗುರಿಗಳನ್ನು ಸಾಧಿಸಲು ಸಹಾಯ ಮಾಡುವುದಿಲ್ಲ .ಒಬ್ಬ ವಿದ್ಯಾರ್ಥಿ ಗೇಮ್ ಡೆವಲಪರ್ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ ಎಂದು ಹೇಳಿದಾಗ, ಪ್ರಧಾನಿ ಮೋದಿ ಗೇಮಿಂಗ್ ಒಂದು ಕೌಶಲ್ಯ, ಆದರೆ ಗೇಮಿಂಗ್ ಅನ್ನು ಪ್ರೋತ್ಸಾಹಿಸಬಾರದು ಎಂದು ಹೇಳಿದ್ದಾರೆ.
ಗೇಮಿಂಗ್ ಒಂದು ಕೌಶಲ್ಯವಾಗಿ ಉಳಿದಿದೆ ಮತ್ತು ಅದನ್ನು ಜಾಗರೂಕತೆಯನ್ನು ಪರೀಕ್ಷಿಸಲು ಮತ್ತು ಸ್ವಯಂ-ಅಭಿವೃದ್ಧಿಗೆ ಬಳಸಬಹುದು.ಭಾರತದಲ್ಲಿ ಇಂಟರ್ನೆಟ್ ಅಗ್ಗವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಸರ್ಕಾರ ಬೆಟ್ಟಿಂಗ್ ವಿರುದ್ಧ ಕಾನೂನನ್ನು ಮಾಡಿದೆ ಎಂದಿದ್ದಾರೆ
ಆನ್ ಲೈನ್ ಜೂಜಾಟದ ವಿರುದ್ಧಕಾನುನು
ದೇಶದಲ್ಲಿ ಜೂಜಾಟವನ್ನು ಪ್ರೋತ್ಸಾಹಿಸಬೇಕಾಗಿಲ್ಲ. ಆನ್‌ಲೈನ್ ಜೂಜಾಟದ ವಿರುದ್ಧ ಕಾನೂನು ಮಾಡಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿಯಾಗಿದ್ದೇನೆ. ಆದರೂ, ಜನರು ನನಗೆ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಹೇಳುತ್ತಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಮಾದರಿ ಹೊಂದಿದ್ದಾರೆ. ಕೆಲವರು ಬೆಳಗ್ಗೆ ಕೆಲವರು ರಾತ್ರಿಯಲ್ಲಿ ಉತ್ತಮವಾಗಿ ಅಧ್ಯಯನ ಮಾಡುತ್ತಾರೆ. ನಿಮಗೆ ಯಾವುದು ಸರಿಹೊಂದುತ್ತದೆಯೋ ಅದನ್ನು ನಂಬಿರಿ. ಆದರೆ ಸಲಹೆಯನ್ನು ಸಹ ತೆಗೆದುಕೊಳ್ಳಿ, ಅದು ನಿಮಗೆ ಪ್ರಯೋಜನವನ್ನು ನೀಡಿದರೆ, ಅದನ್ನು ನಿಮ್ಮ ಜೀವನ ರಚನೆಗೆ ಸೇರಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ನಿಯಮ ಬದಲಾವಣೆ; ಪಿಎಂ
ಪರೀಕ್ಷಾ ಪೆ ಚರ್ಚಾ’ದಲ್ಲಿ ಕೆಲವು ವಿಷಯಗಳನ್ನು ಬದಲಾಯಿಸಿದ್ದೇನೆ, “ಪರೀಕ್ಷಾ ಪೆ ಚರ್ಚೆ ಪ್ರಾರಂಭಿಸಿದಾಗ, ಮಾದರಿ ಇತ್ತು. ಈಗ, ಕ್ರಮೇಣ, ಅದನ್ನು ಬದಲಾಯಿಸುತ್ತಿದ್ದೇನೆ. ಈ ಬಾರಿ, ವಿವಿಧ ರಾಜ್ಯಗಳಲ್ಲಿಯೂ ಚರ್ಚೆ ಮಾಡಿದ್ದೇನೆ. ಆದರೆ ಮೂಲ ಮಾದರಿ ಕೈಬಿಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಳವಣಿಗೆಗೆ ಪ್ರಮುಖವಾದ ಅಧ್ಯಯನ, ವಿಶ್ರಾಂತಿ, ಕೌಶಲ್ಯ ಮತ್ತು ಹವ್ಯಾಸಗಳನ್ನು ಸಮತೋಲನಗೊಳಿಸಲು ಎರಡು ಕೌಶಲ್ಯಗಳಿವೆ. ಜೀವನ ಕೌಶಲ್ಯ ಮತ್ತು ವೃತ್ತಿಪರ ಕೌಶಲ್ಯಗಳು. ಎರಡೂ ಒಟ್ಟಿಗೆ ಇರುತ್ತವೆ ಎಂದು ಹೇಳುತ್ತೇನೆ. ಆದ್ದರಿಂದ, ಕೌಶಲ್ಯ ಜ್ಞಾನದಿಂದ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಸಿ ಎಂದು ಸಲಹೆ ನೀಡಿದ್ದಾರೆ.


























