
ಶಿಡ್ಲಘಟ್ಟ:-ಡಿ,೦೫- ಏಡ್ಸ್ ನಿಯಂತ್ರಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಬೇಕು, ಮುಖ್ಯವಾಗಿ ಹೆಚ್ ಐ ವಿ ಸೋಂಕಿತಕ್ಕೆ ಒಳಗಾದ ವ್ಯಕ್ತಿಗಳನ್ನು ತಿರಸ್ಕಾರ ಅಥವಾ ಅಸಹ್ಯ ಪಡದೆ ಏರ್ಡ್ಸ್ ಹತ್ತೋಟಿಯಲ್ಲಿ ಇಡಲು ಕಾಲ ಕಾಲಕ್ಕೆ ದೈದ್ಯರ ಸಲಹೆ ಸೂಚನೆ ಪಡೆಯುವಂತೆ ಮಾಡಬೇಕು, ಅಂತಹ ರೋಗಿಗಳನ್ನು ಈ ಸಮಾಜದಲ್ಲಿ ಎಂದಿಗೂ ಕೀಳು ಭಾವನೆಯಿಂದ ನೋಡದೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ ತಿಳಿಸಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ವಿಶ್ವ ಏಡ್ಸ್ ಹಾಗೂ ವಿಕಲಾಂಗ ದಿನಾಚರಣೆಯನ್ನು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ ತಾಲ್ಲೂಕು ಆರೋಗ್ಯ ಕೇಂದ್ರ, ಐ ಸಿ ಟಿ ಸಿ ಕೇಂದ್ರ, ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹಿಂದಿನ ಯುವ ಜನತೆ ಹೆಚ್ ಐ ವಿ ಸೋಂಕಿತರಲ್ಲಿ ಜಾಗೃತಿ ಮೂಡಿಸುವುದು, ತಪ್ಪು ತಿಳಿವಳಿಕೆಗಳನ್ನು ನಿವಾರಿಸುವುದು, ಶಾಲೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ಹಾಗೂ ಸಮುದಾಯ ಕಾರ್ಯಕ್ರಮಗಳ ಮೂಲಕ ಸೋಂಕು ಹರಡುವಿಕೆಯ ಬಗ್ಗೆ ಮಾಹಿತಿಯನ್ನು ಹರಡುವ ಕೆಲಸ ಮಾಡಿ ಸುರಕ್ಷಿತೆಯ ಅರಿವು ಮೂಡಿಸುವುದರಲ್ಲಿ ಯುವಜನರು ಏಡ್ಸ್ ನಿರ್ಮೂಲನೆಗೆ ಸಕ್ರಿಯ ಪಾತ್ರಧಾರಿಗಳಾಗಬೇಕು ಎಂದರು.
ಅಪಘಾತಗಳ ಮೂಲಕ ಅಂಗ ವೈಫಲ್ಯತೆ ಮತ್ತು ಹುಟ್ಟಿನಿಂದ ವಿಕಲತೆಯಿಂದ ಬಳಲುತ್ತಿರುವ ಮಕ್ಕಳು ದೇವರ ಸೃಷ್ಟಿ ಅದು ಯಾರ ತಪ್ಪು ಅಲ್ಲ, ಎಲ್ಲಾದರೂ ಕಂಡೆರೆ ಮಾನವೀಯತೆ ತೋರಿ ಬದುಕಿಗಾಗಿ ಧೈರ್ಯ ತುಂಬಿ ವಿಕಲಾಂಗ ಮಕ್ಕಳಿಗೆ ಆಸರೆಗಾಗಿ ಕೈಲಾದ ಸಹಾಯ ಮಾಡಿ ಮತ್ತು ಹಬ್ಬ ಹರಿದಿನಗಳಲ್ಲಿ ಅವರು ಜೊತೆಯಲ್ಲಿ ಕಾಲ ಕಳೆಯಲು ಪ್ರಯತ್ನಿಸಿ ಯಾರೂ ಶಾಶ್ವತವಲ್ಲ ಎಲ್ಲರೂ ಒಂದು ದಿನ ಸಾಯುತ್ತೇವೆ ಇರುವ ದಿನಗಳಲ್ಲಿ ನಾವು ಮಾಡುವ ಸೇವೆ ಅನನ್ಯವಾಗಿರುತ್ತದೆ ಎಂದರು.
ಸಂದರ್ಭದಲ್ಲಿ ತಹಶೀಲ್ದಾರ್ ಕುಮಾರಿ ಗಗನಸಿಂಧು, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾದ್ಯಕ್ಷ ಮುನಿಶಾಮೇಗೌಡ, ವಕೀಲರಾದ ಬಾಸ್ಕರ್, ರಾಮಕೃಷ್ಣ, ಸಿ ಡಿ ಪಿ ಓ ವಿದ್ಯಾ ವಸ್ತದ್, ಆರೋಗ್ಯ ಇಲಾಖೆ ದೇವರಾಜು, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳು, ಮುಂತಾದವರು ಹಾಜರಿದ್ದರು.


































