ಆರ್‍ಎಸ್‍ಎಸ್ ಪಥಸಂಚನಕ್ಕೆ ಅನುಮತಿ ನೀಡಬೇಡಿ

ಕಲಬುರಗಿ,ಅ.25-ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಆರ್‍ಎಸ್‍ಎಸ್ ಸಂಘಟನೆಗೆ ಪಥ ಸಂಚಲನಕ್ಕೆ ಅನುಮತಿ ನೀಡದೇ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಫೆÇೀನ್ ಕಾಲ್ ಮಾಡಿ ಬೆದರಿಕೆ ಹಾಕಿದ ಮತ್ತು ಹಾಕುತ್ತಿರುವ ವ್ಯಕ್ತಿಗಳನ್ನೂ ಕೋಕಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಕೆಪಿಸಿಸಿ ಪದವೀಧರ ವಿಭಾಗದ ಪ್ರಧಾನಕಾರ್ಯದರ್ಶಿ ಹಾಗೂ ನ್ಯಾಯವಾದಿ ಭೀಮನಗೌಡ ಪರಗೊಂಡ ಆಗ್ರಹಿಸಿದ್ದಾರೆ.
ಈ ಸಂಬಂಧ ಜೇವರ್ಗಿ ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಿರುವ ಅವರು, ಭಾರತ ದೇಶ, ಕರ್ನಾಟಕ ರಾಜ್ಯ, ಕಲಬುರ್ಗಿ ಜಿಲ್ಲೆ ಹಾಗೂ ಚಿತ್ತಾಪುರ ತಾಲ್ಲೂಕು ಮತ್ತು ಚಿತ್ತಾಪುರ ಪಟ್ಟಣ ಬಹುತ್ವದ ಬೀಡಾಗಿದೆ ಮತ್ತು ಸಾಮರಸ್ಯದ ಕೇಂದ್ರವಾಗಿದೆ. ಇಲ್ಲಿ ಹಲವಾರು ಜಾತಿ, ಮತ, ಧರ್ಮ, ಸಂಸ್ಕøತಿ ಮತ್ತು ಭಾಷೆಯನ್ನು ಮಾತಾಡುವ ಜನರು ಸೌಹಾರ್ದಯುತವಾಗಿ ಬಾಳುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿದ್ದಾರೆ. ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆ ಮತ್ತು ಚಿತ್ತಾಪುರ ಪಟ್ಟಣವು ಶರಣರು, ಸೂಫಿಗಳು, ಸಂತರು ನಡೆದಾಡಿದ ಪುಣ್ಯ ಭೂಮಿ ಆಗಿದೆ. ಚಿತ್ತಾಪುರ ತಾಲ್ಲೂಕು ಅಳ್ಳೊಳ್ಳಿ ನಾಗಪ್ಪಯ್ಯ, ದಂಡಗುಂಡ ಬಸವೇಶ್ವರ, ನಾಲವಾರದ ಕೋರಿಸಿದ್ದೇಶ್ವರರು, ವಾಡಿ ಪಟ್ಟಣದ ಹಜರತ್ ಚೀತಾ ಷಾ ವಾಲಿ ಮತ್ತು ಹಜರತ್ ಪೀರ ಖಾದ್ರಿ ಹಾಗೂ ಚಿತ್ತಾಪುರ ಹೊರವಲಯದ ನಾಗಾವಿ ಯಲ್ಲಮ್ಮ ,ಕೋರವಾರದ ಅಣಿವೀರಭದ್ರೇಶ್ವರರು, ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕ ಕಾಲದ ಶಿಲಾ ಶಾಸನ ಇರುವ ಸನ್ನತಿ, ಚಂದ್ರಲಾಂಬ ಪರಮೇಶ್ವರಿ ದೇವಸ್ಥಾನ ಇಂತಹ ಅಸಂಖ್ಯಾತ ಹಿರಿಮೆ ಮತ್ತು ಮಹತ್ವವನ್ನು ತನ್ನ ಒಡಲಿಟ್ಟುಕೊಂಡಿರುವ ನೆಲದಲ್ಲಿ ಬಲಪಂಥೀಯ ಸಂಘಟನೆಯು ಅಲ್ಲಿಯೇ ಪಥ ಸಂಚಲನ ಮಾಡಲು ಹಠ ಹಿಡಿದಿರುವ ಹಿಂದೆ ಸಾಮರಸ್ಯ ಹಾಗೂ ಸೌಹಾರ್ದ ಕದಡುವ ಸಂಭವ ದಟ್ಟವಾಗಿದೆ. ಇದಕ್ಕೆ ಆಸ್ಪದ ಕೊಡದೇ ಚಿತ್ತಾಪುರ ಅಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಆರ್‍ಎಸ್‍ಎಸ್ ಮುಖಂಡರಿಗೆ ಅನುಮತಿ ಕೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಆರ್‍ಎಸ್‍ಎಸ್ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಟೀಕೆ ಮಾಡಿದ್ದಕ್ಕೆ ಅವರಿಗೆ ಬೆದರಿಕೆ ಹಾಕುವ ಮೂಲಕ ಅವರ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ಆರ್‍ಎಸ್‍ಎಸ್ ಪರ ಒಲವು ಇದ್ದವರು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸರ್ಕಾರದ ಜವಾಬ್ದಾರಿಯುತವಾದ ಸಚಿವ ಹುದ್ದೆಯಲ್ಲಿ ಇರುವ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕುತ್ತಿರುವ ವ್ಯಕ್ತಿಗಳ ಬಗ್ಗೆ ಗೃಹ ಇಲಾಖೆ ಕಣ್ಗಾವಲು ಇಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.