ಡೊಂಗರಗಾಂವ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಅ.29-ಕಲಬುರಗಿ ಉತ್ತರ ವಲಯದ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಡೊಂಗರಗಾಂವ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕೃಷ್ಣ ತಂದೆ ಶ್ರೀಕಾಂತ ಪ್ರಥಮ ಸ್ಥಾನ (ಎತ್ತರ ಜಿಗಿತ ಸ್ಪರ್ಧೆ), 1500ಮೀ ಓಟದಲ್ಲಿ ಗುಂಡಪ್ಪ ತಂದೆ ಪಿರಪ್ಪ ದ್ವಿತೀಯ ಸ್ಥಾನ, 800ಮೀ ಓಟದಲ್ಲಿ ನಾಗೇಶ್ ತಂದೆ ಶ್ರೀನಾಥ ತೃತೀಯ ಸ್ಥಾನ ಮತ್ತು ತ್ರಿವಿಧ ಜಿಗಿತದ ಸ್ಪರ್ಧೆಯಲ್ಲಿ ಸಂಗಮೇಶ್ ತಂದೆ ವಿಜಯಕುಮಾರ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಗುರುಗಳಾದ ಸುನಿತಾ ಬಿರಾದರ್, ದೈಹಿಕ ಶಿಕ್ಷಣ ಶಿಕ್ಷಕರಾದ ರವಿಚಂದ್ರ ಹರಸೂರ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಮತ್ತು ಗ್ರಾಮದ ಹಿರಿಯರು ಶಾಲೆಯ ಹಳೆಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.