ಜಿಲ್ಲಾ ಟಿ.ಚೆನ್ನಯ್ಯ ರಂಗಮಂದಿರಕ್ಕೆ ದುರಸ್ಥಿಯ ಕಾಯಕಲ್ಪ ಅಗತ್ಯ

ಕೋಲಾರ,ಜೂ,೪-ನಗರದ ಟಿ.ಚೆನ್ನಯ್ಯ ಜಿಲ್ಲಾ ರಂಗಮಂದಿರದ ನಿರ್ಮಾಣ ಕೋಲಾರದಲ್ಲಿ ಐತಿಹಾಸಕ ದಾಖಾಲೆಯಾಗಿದೆ. ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಯಾವೂದೇ ಪ್ರಮುಖ ಕಾರ್ಯಕ್ರಮಗಳು ಆಯೋಜಿಸ ಬೇಕಾಗದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಸೇರಿದ ಇದೇ ರಂಗ ಮಂದಿರದಲ್ಲಿ ಆಯೋಜಿಸುವುದು. ಅದರೆ ಈ ರಂಗ ಮಂದಿರ ನಿರ್ಮಾಣ ಮಾಡಿ ಸುಮಾರು ೩ ದಶಕಗಳಾಗಿದ್ದು ಇಂದು ಬಹಳಷ್ಟು ದುರಸ್ಥಿ ಮಾಡಬೇಕಾಗಿದ್ದು ಅಧುನೀಕರಣ ಮಾಡುವುದು ಅವಶ್ಯವಿದೆ. ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ಜಿಲ್ಲಾ ರಂಗ ಮಂದಿರದಲ್ಲಿ ವಿದ್ಯುತ್ ಹಾಗೂ ಧ್ವನಿವರ್ಧಕ ಸೇರಿದಂತೆ ಹಲವಾರು ಮೂಲ ಭೂತ ಸೌಲಭ್ಯಗಳ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತ ಪಡೆಸುತ್ತಿರುವುದ ಸ್ವಾಭಿಮಾನಿ ಕೋಲಾರದ ನಾಗರೀಕರಿಗೆ ಮುಜುಗರ ಉಂಟಾಗುತ್ತಿದೆ.


ಈ ಸಂಬಂಧವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮೀ ಅವರು ಸಂದರ್ಶಿಸಿದಾಗ ರಂಗಮಂದಿರದ ಅಧುನೀಕರಣ ದುರಸ್ಥಿ ಕಾರ್ಯಕ್ಕೆ ಸುಮಾರು ೨,೫ ಕೋಟಿ ರೂ ವೆಚ್ಚ ಅಂದಾಜು ಪಟ್ಟಿಯನ್ನು ಸಿದ್ದಪಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಬೋರ್‌ವೆಲ್. ಶುದ್ದ ಕುಡಿಯುವ ನೀರಿನ ಘಟಕ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಜೂತೆಗೆ ವಿದ್ಯುತ್ ದೀಪಗಳು ಮತ್ತು ಧ್ವನಿವರ್ಧಕಕ್ಕೆ ಸಂಬಂಧ ಪಟ್ಟಂತೆ ಅಧುನೀಕರಣದ ವ್ಯವಸ್ಥೆಗಳನ್ನು ಕಲ್ಪಿಸ ಬೇಕೆಂದು ಮನವಿ ಮಾಡಲಾಗಿದೆ ಎಂದರು,


ಪ್ರತಿ ವರ್ಷ ನೊರಾರು ಕಾರ್ಯಕ್ರಮಗಳು ರಂಗಮಂದಿರದಲ್ಲಿ ಜಿಲ್ಲಾಡಳಿತ ಸೇರಿದಂತೆ ಖಾಸಗಿ ಕಾರ್ಯಕ್ರಮಗಳು ನಡೆಯುತ್ತಿರುವುದು. ಮುಖ್ಯವಾಗಿ ನೀರಿನ ಸೌಲಭ್ಯಕ್ಕಾಗಿ ಕೊಳವೆ ಬಾವಿ, ಕುಡಿಯಲು ಶುದ್ದ ಕುಡಿಯುವ ನೀರಿನ ಘಟಕ, ರಂಗಮಂದಿರದೊಳಗೆ ಸಮರ್ಪಕವಾದ ಧ್ವನಿ ವರ್ಧಕ ವ್ಯವಸ್ಥೆ ಹಾಗೂ ಲೈಟಿಂಗ್ ವ್ಯವಸ್ಥೆಗಳನ್ನು ಅಧುನೀಕರಣ ಮಾಡ ಬೇಕಾಗಿದೆ. ಈಗಾಗಲೇ ಈ ಕುರಿತು ಜಿಲ್ಲಾಡಳಿತದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.


ಸಾರ್ವಜನಿಕರ ಮನರಂಜನ ಕಾರ್ಯಕ್ರಮ ನೀಡಲು ಅನೇಕ ಕಲಾವಿದರ ಜೀವನೋಪಯ, ಹೊಟ್ಟೆಪಾಡಿಗಾಗಿ ಕಲಾವಿಧರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ರಂಗಮಂದಿರವನ್ನು ಅವಲಂಭಿತರಾಗಿದ್ದಾರೆ. ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಮನರಂಜಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಮಂದಿ ಕಲಾವಿಧರು ಇದ್ದಾರೆ. ಈ ಪೈಕಿ ೪೧೨ ಮಂದಿ ಕಲಾವಿಧರನ್ನು ಗುರುತಿಸಿದ್ದು. ಪ್ರತಿ ಮಾಹೆ ೨ ಸಾವಿರ ರೂ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದಾರೆಂದರು.


ಪ್ರಶ್ನೆಯೊಂದಕ್ಕೆ ೨೦೨೩-೨೪ನೇ ಸಾಲಿನಲ್ಲಿ ೨೦.೬೦ ಲಕ್ಷ ರೂ ಪ್ರಯೋಜಿತ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಲಾಯಿತು, ೨೦೨೪-೨೫ನೇ ಸಾಲಿನಲ್ಲಿ ೮ ಲಕ್ಷ ರೂ ಬಿಡುಗಡೆ ಮಾಡಿದೆ. ಕಲಾವಿದರಿಗೆ ಪಾವತಿಸ ಬೇಕಾದ ೧೦೫ ಬಿಲ್‌ಗಳು ಬಾಕಿ ಉಳಿದಿದ್ದು ಮುಖ್ಯ ಕಚೇರಿಯಿಂದ ಅನುದಾನ ಬಿಡುಗಡೆ ಮಾಡ ಬೇಕಾಗಿದೆ, ರಂಗಮಂದಿರದಿಂದ ಅದಾಯಕ್ಕಿಂತ ನಿರ್ವಾಹಣೆಯ ವೆಚ್ಚವೇ ಅಧಿಕವಾಗಿದೆ. ಎಂದ ಅವರು ಅದಾಯ ೮ ಲಕ್ಷದ ಜೂತೆಗೆ ಸರ್ಕಾರದಿಂದ ಅನುದಾನ ೬ ಲಕ್ಷ ಬಿಡುಗಡೆಯಾಗಿದೆ.ಒಟ್ಟು ೧೪ ಲಕ್ಷ ರೂಗಳಾಗಿದೆ. ಅದರೆ ರಂಗಮಂದಿರದ ಒಟ್ಟು ವೆಚ್ಚವೇ ೧೮.೩೭ ಲಕ್ಷ ರೂಗಳಾಗಿದ್ದು ಸುಮಾರು ೪ ಲಕ್ಷ ಕ್ಕೂ ಅಧಿಕ ಕೊರತೆ ಉಂಟಾಗಲಿದೆ ಇದನ್ನು ಇತರೆಗಳಿಂದ ಹೊಂದಿಸಲಾಗುತ್ತಿದೆ ಎಂದು ತಿಳಿಸಿದರು,


ರಂಗಮಂದಿರಕ್ಕೆ ಒಂದು ದಿನಕ್ಕೆ ೧೨,೫೨೫ ರೂ ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಈ ಮೊದಲು ನಿರ್ವಾಹಣೆ ವೆಚ್ಚ ಕಳೆದು ೮,೯೦೦ ಪಡೆಯಲಾಗುತ್ತಿತ್ತು ಈಗಾ ನಿರ್ವಹಣೆಯ ವೆಚ್ಚ ಸೇರಿದಂತೆ ಪ್ರತಿ ಮಾಹೆ ೪೦ ರಿಂದ ೫೦ ಸಾವಿರ ರೂ ಭರಿಸ ಬೇಕಾಗುತ್ತದೆ ಯಾರಿಗೂ ಬಾಡಿಗೆ ಪಡೆಯದೆ ಉಚಿತವಾಗಿ ರಂಗಮಂದಿರನ್ನು ನೀಡುವುದಿಲ್ಲ. ಜಿಲ್ಲಾಡಳಿತದೊಂದಿಗೆ ಪ್ರಯೋಜಿತ ಸಂಸ್ಥೆಗಳು ಶೇ ೫೦ ರಷ್ಟು ಬಾಡಿಗೆಯನ್ನು ಪಡೆಯಲಾಗುವುದು ಎಂದರು,


ರಂಗ ಮಂದಿರದ ಸ್ವಚ್ಚತೆ, ಶೌಚಾಲಯಾದ ಕ್ಲಿನಿಂಗ್,ಸಿಬ್ಬಂದಿಗಳ ವೇತನ, ನಿರ್ವಾಹಣೆಯ ಕ್ಲಿನಿಂಗ್ ಪರಿಕರಗಳು, ವಿದ್ಯುತ್, ನೀರು, ಜೆನೆರೆಟರ್‌ಗೆ ಡಿಸೇಲ್. ವಾಹನಕ್ಕೆ ಪೆಟ್ರೋಲ್ ಇತರೆ ದುರಸ್ಥಿಗಳು ಸೇರಿದಂತೆ ಹೆಚ್ಚು ವೆಚ್ಚಗಳನ್ನು ಭರಿಸ ಬೇಕಾಗಿದೆ. ಈ ಹಿಂದೆ ನೀರನ್ನು ಖಾಸಗಿಯವರಿಂದ ಪೂರೈಕೆ ಮಾಡಿ ಕೊಳ್ಳಲಾಗುತ್ತಿತ್ತು. ನಾನು ಆಡಳಿತ ವಹಿಸಿ ಕೊಂಡ ನಂತರ ನಗರಸಭೆಯಿಂದ ಉಚಿತವಾಗಿ ನೀಡುತ್ತಿದ್ದಾರೆ. ವಿದ್ಯುತ್ ವ್ಯವಸ್ಥೆಗೆ ಟ್ರಾನ್ಸ್‌ಫಾರ್ಮರ್ ಅಗತ್ಯ ಇರುವುದರ ಬಗ್ಗೆ ಬೆಸ್ಕಾಂಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಉಚಿತವಾಗಿ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ ಎಂದು ಹೇಳಿದರು.


ಪ್ರಶ್ನೆಯೊಂದಕ್ಕೆ ರಂಗ ಮಂದಿರಕ್ಕೆ ಈ ಹಿಂದೆ ಮುಂಭಾಗದ ಮುಖ್ಯ ಪ್ರವೇಶ ದ್ವಾರದಿಂದಲೇ ಪ್ರವೇಶವಿತ್ತು ಅದರೆ ಈ ಹಿಂದೆ ಯಾವಗಲು ಪ್ರವೇಶದ್ವಾರವನ್ನು ಮುಚ್ಚಲಾಗಿರವ ಹಿನ್ನಲೆಯಲ್ಲಿ ಬೇರೆ ವ್ಯವಸ್ಥೆ ಮಾಡಲಾಗಿದೆ. ಈಗಾ ರಂಗಮಂದಿರದ ಸೌಂದರ್ಯ ಧಕ್ಕೆಯುಂಟಾಗುತ್ತಿದೆ ಎಂದು ಈಗಾ ಮುಂಬಾಗಿಲನಿಂದ ಪ್ರವೇಶ ಮಾಡಲು ಮುಚ್ಚಿರುವ ಬಾಗಿಲನ್ನು ತೆರೆಯಲು ಚಿಂತಿಸಿದೆ ಇದಕ್ಕೆ ಅಡ್ಡಿಯಾಗಿರುವ ಕ್ಯಾಬಿನ್ ಮಹಡಿ ಮೇಲ್ಬಾಗದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಈ ಹಿಂದೆ ಕ್ರಿಯಶೀಲ ಚಟುವಟಿಕೆಗಳಿಂದ ಕೊಡಿತ್ತು ಕೊಠಡಿಯನ್ನು ಸ್ವಚ್ಚವಾಗಿಟ್ಟು ಕೊಂಡಿದ್ದರೂ ಅದರೆ ಕಳೆದ ೨-೩ ವರ್ಷಗಳಿಂದ ಕ.ಸಾ.ಪ. ಕೊಠಡಿಯ ಸುತ್ತಮುತ್ತ ಪಾರಿವಾಳ, ಪಕ್ಷಿಗಳು ತಾಣವಾಗಿ ತುಂಭ ಗಲೀಜಿನಿಂದ ಕೊಡಿತ್ತು ಈ ಬಗ್ಗೆ ಮಾದ್ಯಮಗಳು ವರದಿ ಮಾಡಿದ ನಂತರ ನಾವೇ ಅದನ್ನು ಸ್ವಚ್ಚ ಗೊಳಿಸಿ, ಯಾವೂದೇ ರೀತಿ ಉಪಯೋಗಿಸದೆ ವ್ಯರ್ಥವಾಗಿಟ್ಟು ಕೊಂಡಿರುವ ಕೊಠಡಿಯನ್ನು ತೆರವು ಮಾಡಿಸಿ ರಂಗ ಮಂದಿರದ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.