
ಕಲಬುರಗಿ,ಅ.29-2025-26ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ಯುವಜನೋತ್ಸವ, ವಿಜ್ಞಾನ ಮೇಳ ಕಾರ್ಯಕ್ರಮವನ್ನು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ವಿನೋದ್ ಕುಮಾರ ಪತಂಗೆ, ಜಿಲ್ಲಾ ವಿಜ್ಞಾನ ಕೇಂದ್ರ ಅಧಿಕಾರಿ ಕೆ.ಎಂ.ಸುನಿಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ವೈ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಕಿ ತರಬೇತಿದಾರ ಸಂಜಯ ಬಾಣದ, ಬಾಸ್ಕೆಟ್ ಬಾಲ್ ತರಬೇತಿದಾರರಾದ ಪ್ರವೀಣ್ ಕುಮಾರ್ ಪುಣೆ, ರಾಜು, ಕುಮಾರಿ ಮಮತಾ, ವಿಜ್ಞಾನ ಕೇಂದ್ರ ಎಲ್ಲ ಸಿಬ್ಬಂದಿ ವರ್ಗದವರು, ಬೇರೆ ಬೇರೆ ಶಾಲೆ, ಕಾಲೇಜುಗಳ 26 ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ ಪ್ರಥಮ ಸ್ಥಾನ 5,000 ದ್ವಿತೀಯ ಸ್ಥಾನ 3000 ದ್ವಿತೀಯ ಸ್ಥಾನ 2000 ಇಲಾಖೆಯಿಂದ ಆನ್ಲೈನ್ ಮೂಲಕ ನೀಡಲಾಗುವುದು ಪ್ರಶಸ್ತಿ ಪತ್ರ ಟ್ರೋಫಿಗಳು ನೀಡಲಾಗುವುದು.






























