ಉತ್ಸವ ಸಿದ್ದತೆ ಕುರಿತು ಅಧಿಕಾರಗಳೊಂದಿಗೆ ಚರ್ಚೆ


ಚನ್ನಮ್ಮನ ಕಿತ್ತೂರು,ಅ.೧೭:
ಉತ್ಸವಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿರುತ್ತದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.


ಕೋಟೆ ಆವರಣದಲ್ಲಿ ನಡೆಯಲಿರುವ ಅ. ೨೩ ರಿಂದ ೨೫ರವರೆಗೆ ಕಿತ್ತೂರು ಚನ್ನಮ್ಮಾಜೀ ೨೦೧ನೇ ವಿಜಯೋತ್ಸವ ಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು. ಈ ಸಲ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದ್ದು ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಿಂದ ಆಚರಿಸಲಾಗುವುದು. ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಅದಲ್ಲದೇ ಅಧಿಕಾರಿಗಳಿಗೆ ಕೊಟ್ಟ ಜವಾಬ್ದಾರಿಯುತ ಕೆಲಸಗಳನ್ನು ಸಭೆ ನಡೆಸುವುದರ ಮೂಲಕ ತಯಾರಿಮಾಡಿಕೊಂಡು ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡಬಾರದು. ಒಟ್ಟಾರೆಯಾಗಿ ಈ ವಿಜಯೋತ್ಸವವನ್ನು ವಿಜೃಂಭಣೆಯಿAದ ಎಲ್ಲರೂ ಸೇರಿ ಆಚರಿಸೋಣವೆಂದರು.


ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಕಲ್ಲನಗೌಡ ಪಾಟೀಲ, ಡಿವೈಎಸ್ಪಿ ಡಾ. ವೀರಯ್ಯಾ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಪ್ರವೀಣ ಗಂಗೋಳ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಎಇಇ ಸಂಜೀವ ಮಿರಜಕರ, ಕ್ಯೂರೇಟರ್ ರಾಘವೇಂದ್ರ, ಕಂದಾಯ ನಿರೀಕ್ಷಕ ಎಂ.ಎA. ನೀರಲಗಿ, ಮುಖಂಡರುಗಳಾದ ಕೃಷ್ಣಾ ಬಾಳೇಕುಂದರಗಿ, ಅಶಪಾಕ ಹವಾಲ್ದಾರ, ಇನ್ನಿತರರಿದ್ದರು.