Home ಜಿಲ್ಲೆ ದಿಲ್ಕಾಶ್ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಆಯೋಜನೆ

ದಿಲ್ಕಾಶ್ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಆಯೋಜನೆ

ಬೀದರ್: ಮಾ.9:ಬಯರ್ ಸೆಮಿನೆಸ್ ಕಂಪನಿ ವತಿಯಿಂದ ದಿಲ್ಕಾಶ್ (ಆiಟಚಿಞಚಿsh) ಕಲ್ಲಂಗಡಿ ಬೆಳೆ ಕುರಿತು ಕ್ಷೇತ್ರೋತ್ಸವವನ್ನು ಬೀದರ್ ಜಿಲ್ಲೆಯ ಇಟ್ಟಗುಪ್ಪ ತಾಲೂಕು ನೀರನ ಗ್ರಾಮದ ಪ್ರಗತಿಪರ ರೈತ ಶರಣು ಕಾಶಾಂಪುರೆ (ತಂದೆ: ಸುಭಾಷ್ ಕಾಶಂಪುರಿ) ಅವರ ಹೊಲದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ದಿಲ್ಕಾಶ್ ಕಲ್ಲಂಗಡಿ ತಳಿಯ ವಿಶೇಷತೆಗಳ ಕುರಿತು ಮಾಹಿತಿ ನೀಡಲಾಯಿತು. ಈ ತಳಿ ಚಳಿಗಾಲ, ಬೇಸಿಗೆ ಹಾಗೂ ಮಳೆಗಾಲ ಸೇರಿದಂತೆ ಮೂರು ಸೀಸನ್‍ಗಳಲ್ಲಿ ಬೆಳೆಸಬಹುದಾದ ಉತ್ತಮ ತಳಿಯಾಗಿದ್ದು, ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಲಾಯಿತು. ನಾಟಿ ಮಾಡಿದ ನಂತರ 60ರಿಂದ 65 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯಿಂದ ಒಂದು ಎಕರೆ ಜಮೀನಿನಲ್ಲಿ ಸುಮಾರು 24ರಿಂದ 25 ಟನ್ ಉತ್ಪಾದನೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವಂತಹ ಈ ಕಲ್ಲಂಗಡಿ ತಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಪ್ರಸ್ತುತ ಕಲ್ಲಂಗಡಿ ಹಣ್ಣು ಪ್ರತಿ ಕಿಲೋಗ್ರಾಂಗೆ ಸುಮಾರು 12ರಿಂದ 15 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಆದ್ದರಿಂದ ರೈತರು ಈ ತಳಿಯನ್ನು ಬೆಳೆಸುವುದರಿಂದ ಉತ್ತಮ ಆದಾಯ ಗಳಿಸಬಹುದಾಗಿದೆ ಎಂದು ಬಯರ್ ಸೆಮಿನೆಸ್ ಕಂಪನಿಯ ಮಾರ್ಕೆಟಿಂಗ್ ಅಧಿಕಾರಿ ಅರುಣ ಎ. ಇಟಗ ಹಾಗೂ ಷಣ್ಮುಖ ಕಂಪನಿಯ ಹನುಮಂತ ನಂದಿ ಹೇಳಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಐನಾಪುರ, ವೀರೇಶ, ಬಸವರಾಜ, ಸಮೀರ್, ಖರೀದಿದಾರ ಅಶೋಕ್ ಸೇರಿದಂತೆ ಅನೇಕ ರೈತರು ಹಾಗೂ ಆಸಕ್ತರು ಉಪಸ್ಥಿತರಿದ್ದರು.