
ನವದೆಹಲಿ,ಆ.೨೦-ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ವಿಚ್ಛೇದನದ ಬಗ್ಗೆ ಮೌನ ಮುರಿದ ಸುಮಾರು ಒಂದು ತಿಂಗಳ ನಂತರ, ಅವರ ಮಾಜಿ ಪತ್ನಿ ಮತ್ತು ಪ್ರಸಿದ್ಧ ನರ್ತಕಿ-ನಟಿ ಧನಶ್ರೀ ವರ್ಮಾ ಕೂಡ ಅದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಧನಶ್ರೀ ತನ್ನ ನೋವು ಮತ್ತು ಮಾನಸಿಕ ಹೋರಾಟದ ಬಗ್ಗೆ ಮತ್ತು ಈ ವಿಚ್ಛೇದನ ತನ್ನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.
ಈ ಸಮಯದಲ್ಲಿ, ಅವರು ನ್ಯಾಯಾಲಯದಲ್ಲಿ ನಡೆದ ಅಂತಿಮ ವಿಚಾರಣೆಯನ್ನು ಸಹ ಉಲ್ಲೇಖಿಸಿದ್ದಾರೆ, ಅಲ್ಲಿ ಅವರು ಚಾಹಲ್ ಧರಿಸಿದ್ದ ಬಿ ಯುವರ್ ಓನ್ ಶುಗರ್ ಡ್ಯಾಡಿ ಟಿ-ಶರ್ಟ್ ಬಗ್ಗೆ ಟೀಕಿಸಿದ್ದಾರೆ.
ತೀರ್ಪು ಪ್ರಕಟವಾಗುವ ಹಂತದಲ್ಲಿ ನಾನು ಅಲ್ಲಿ ನಿಂತಿದ್ದಾಗ ನನಗೆ ಇನ್ನೂ ನೆನಪಿದೆ. ನಾವು ಮಾನಸಿಕವಾಗಿ ಸಿದ್ಧರಾಗಿದ್ದೆವು, ಆದರೆ ನಾನು ತುಂಬಾ ಭಾವುಕಳಾಗಿದೆ.ನಾನು ಎಲ್ಲರ ಮುಂದೆ ಅಳಲು ಪ್ರಾರಂಭಿಸಿದೆ. ಆ ಸಮಯದಲ್ಲಿ, ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಅಳುತ್ತಲೇ ಇದ್ದೆ ಎಂದು ನನಗೆ ನೆನಪಿದೆ ಎಂದು ಧನಶ್ರೀ ಹೇಳಿದ್ದಾರೆ.
ನ್ಯಾಯಾಲಯದ ವಿಚಾರಣೆಯ ದಿನದಂದು ಯುಜ್ವೇಂದ್ರ ಚಾಹಲ್ ಧರಿಸಿದ್ದ ಟಿ-ಶರ್ಟ್ ಬಗ್ಗೆಯೂ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದು ಕೇವಲ ಇಬ್ಬರು ವ್ಯಕ್ತಿಗಳ ಜೀವನದ ಪ್ರಶ್ನೆಯ ಜೊತೆಗೆ ಎರಡು ಕುಟುಂಬಗಳನ್ನು ಬೆಸೆದು ಸಂಗತಿ ಮದುವೆಯು ಪ್ರೀತಿಯಿಂದ ಪ್ರಾರಂಭವಾಗುತ್ತದೆ ಮತ್ತು ಅಪನಂಬಿಕೆಯಿಂದ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ನ್ಯಾಯಾಲಯದ ವಿಚಾರಣೆಯ ದಿನದಂದು ಯುಜ್ವೇಂದ್ರ ಚಾಹಲ್ ಧರಿಸಿದ್ದ ಟಿ-ಶರ್ಟ್ ಬಗ್ಗೆಯೂ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಚ್ಛೇದನ ಎಂದಿಗೂ ಸಂತಸ ಪಡುವ ಆಚರಿಸಬೇಕಾದ ವಿಷಯವಲ್ಲ. ಅದು ದುಃಖಕರ ಮತ್ತು ಭಾವನಾತ್ಮಕ ಘಟನೆ ಎಂದಿದ್ದಾರೆ.