
ನವಲಗುಂದ,ಮಾ6: ಹೋಳಿಹಬ್ಬಕ್ಕೆ ದೇಶದೆಲ್ಲೆಡೆ ವಿಶೇಷತೆ ಪಡೆದಿರುವ ಇಲ್ಲಿನ ಶ್ರದ್ಧಾ ಭಕ್ತಿಯಿಂದ ಆಚರಿಸುವ ಹೋಳಿ ಹಬ್ಬಕ್ಕೆ ಗುರುವಾರ ಮಧ್ಯಾಹ್ನ ಕಾಮದಹನ ಮಾಡುವ ಮೂಲಕ ಭಕ್ತಿ ಪೂರ್ವಕ ವಿದಾಯ ಹೇಳಲಾಯಿತು.
ಫೆ. 2 ರಿಂದ ಮಾ.4ರ ವರೆಗೆ ಆರಂಭಗೊಂಡ ಶ್ರೀ ರಾಮಲಿಂಗೇಶ್ವರ ಆರಾಧನೆಯಲ್ಲಿ ದೇಶದ ನಾನಾ ಭಾಗದಿಂದ ಸುಮಾರು ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.
ಮಧ್ಯಾಹ್ನ 3 ಕ್ಕೆ ದೇವಸ್ಥಾನ ತಲಯಪಿದ ನಂತರ ಪರಂಪರೆಯಂತೆ ದಲಿತ ಕಾಮದೇವದ ಚಿತೆಯಿಂದ ರಾಮಲಿಂಗ ಕಾಮದೇವರಿಗೆ ಬೆಂಕಿ ತಂದು ಪೂಜೆ ಸಲ್ಲಿಸಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ. ರಗ್ಗಲಗಿ.ಜಗ್ಗಲಗಿ ಮಜಲುಗಳೊಂದಿಗೆ ಪ್ರದಕ್ಷಿಣೆ ಸಲ್ಲಿಸಿ ಕಾಮದೇವರನ್ನು ದಹನ ಮಾಡಲಾಯಿತು.
ಉಗಾದಿ ಪಾಡ್ಯದಂದು ಕಾಮದೇವರ ಮರು ಹುಟ್ಟಿನ ಪ್ರತೀಕವಾಗಿ ಪುನಃ ರಾಮಲಿಂಗ ಕಾಮದೇವರನ್ನು ಬಾಲ್ಯಾವಸ್ಥೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಕಾಮದೇವರ ಪೂಜೆ ನೆರವೇರಿಸುವುದು ಇಲ್ಲಿನ ಪದ್ದತಿಯಾಗಿದೆ. ಅಂದೂ ಕೂಡ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.




























