
ಗುರುಮಠಕಲ್,ಮಾ.೨೪-ಬಂಜಾರ ಸಮಾಜದವರು ಸಂಪೂರ್ಣವಾಗಿ ಅವರ ಅರಾಧ್ಯ ದೈವವೆಂದು ಭಾವಿಸಿರುವ ಸಂತ ಸೇವಾಲಾಲ್ ಮಹಾರಾಜರು ಮಾನವ ಕೋಟಿಗೆ ಆಗುವಂತಹ ಅನೇಕ ಸಮಸ್ಯೆಗಳಿಗೆ ಸಮಧಾನವನ್ನು ಕೊಡುವಂತಹ ಮಹಾ ಸಂತರು. ಅಂತಹ ಸಂತರ ಹೆಸರಿನಲ್ಲಿ ಅರಕೇರಾ ಕೆ. ಬಸವನತಾಂಡದ ಜನರು ೨೧ದಿನ ಸುಮಾರು ೫೦ ಜನ ಭಕ್ತರು ಮಾಲೆಯನ್ನು ಧರಿಸಿ, ಮಾ.೨೫ ರಂದು ತಾಂಡದಿAದ ಪ್ರಯಾಣ ಬೆಳಸಿ ಮಾ.೨೬ರಂದು ಸೇವಲಾಲ್ ಮಹಾರಾಜರ ಪುಣ್ಯ ಸ್ಥಳವಾದ ಮಹಾರಾಷ್ಟ್ರದ ಪೌಗಡಕ್ಕೆ ಪ್ರಯಾಣ ಬೆಳಸಿದರು. ಸೇವಲಾಲ ಮಹಾರಾಜರ ಸನ್ನಿದಿಯಲ್ಲಿ ಮಾಲೆಯನ್ನು ತೆಗೆದು ಸಂತ್ತರ ಕೃಪೆಗೆ ಪಾತ್ರರಾಗುತ್ತೆವೆ ಎಂದು ಮಲಾದಾರಿಗಳು ತಿಳಿಸಿದರು. ಈ ವೇಳೆ ಹಿರಾಸಿಂಗ್ ರಾಠೋಡ್, ಕಾಂತು ಚವ್ಹಾಣ, ದೀಲಿಪ್ ಚವ್ಹಾಣ, ಶ್ರೀನಿವಾಸ, ಕೃಷ್ಣಾ, ಬೀಮನಾಯಕ, ಗಂಗಾರಾಮ ರಾಠೋಡ್, ಮೋಹನ್ ಚವ್ಹಾಣ, ಶಂಕರ್ ಚವ್ಹಾಣ, ರಮೇಶ್ ಚವ್ಹಾಣ, ರಾಜು ರಾಠೋಡ್ ಭಕ್ತರು ಇದ್ದರು.




























