Home ಜಿಲ್ಲೆ ಕಲಬುರಗಿ ಶರಣರ ಬಗ್ಗೆ ಅವಹೇಳನಕಾರಿ ಪೋಸ್ಟ್: ಕ್ರಮಕ್ಕೆ ಒತ್ತಾಯ

ಶರಣರ ಬಗ್ಗೆ ಅವಹೇಳನಕಾರಿ ಪೋಸ್ಟ್: ಕ್ರಮಕ್ಕೆ ಒತ್ತಾಯ

ಜೇವರ್ಗಿ:ಮಾ.16: ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಶರಣೆ ಅಕ್ಕಮಹಾದೇವಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೆÇೀಸ್ಟ್ ಹಾಕಿದ ಕಿಡಿಗೇಡಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ತಾಲ್ಲೂಕು ಜೈ ಕರವೇ ಅಧ್ಯಕ್ಷರಾದ ಶರಭು ಕಲ್ಯಾಣಿ ಅವರು ಒತ್ತಾಯಿಸಿದ್ದಾರೆ.

ಬಸವಣ್ಣನವರು ದೇವರಲ್ಲ, ಅವರು ಕಾಮುಕ ಹಾಗೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು ಎಂಬ ಸುಳ್ಳುಗಳನ್ನು ಹರಡಿದ್ದಲ್ಲದೆ, ಅಕ್ಕಮಹಾದೇವಿಯೂ ಅಂಥವಳೇ ಎಂದು ರಮಾಕಾಂತ ಎಂಬ ವ್ಯಕ್ತಿ ತನ್ನ ಫೇಸ್ಟುಕ್ ಖಾತೆಯಲ್ಲಿ ಕೀಳುಮಟ್ಟದ ವದಬಳಕೆಯೊಂದಿಗೆ ಪೆÇೀಸ್ಟ್ ಒಂದನ್ನು ಹಂಚಿಕೊಂಡಿದ್ದಾನೆ.

ಈ ಪೆÇೀಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ ಅವರು, ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಅಕ್ಕಮಹಾದೇವಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟದಾಗಿ ಮತ್ತು ಅವಮಾನಕಾರಿಯಾಗಿ ಪೆÇೀಸ್ಟ್ ಮಾಡಿರುವ
ಘಟನೆಯನ್ನು ವೀರಶೈವ ಲಿಂಗಾಯತ ಸಮಾಜ ತೀವ್ರವಾಗಿ ಖಂಡಿಸುತ್ತದೆ. ನಿಂದನಾತ್ಮಕ ಕೃತ್ಯ ಎಸಗಿದ ರಮಾಕಾಂತ ಎಂಬ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ರಮಾಕಾಂತ ಎಂಬ ವ್ಯಕ್ತಿ ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ ಕದಡಲು ಮತ್ತು ಧಾರ್ಮಿಕ ಭಾವ ನೆಗಳಿಗೆ ಧಕ್ಕೆ ತರಲು ಇಂತಹ ಕೃತ್ಯ ಎಸಗಿದ್ದಾನೆ. ಬಸವಣ್ಣನವರು ಕರ್ನಾಟಕದ ಸಾಂಸ್ಕøತಿಕ ರಾಯಭಾರಿ. ಅಂತಹ ಮಹಾನ್ ಚೇತನಕ್ಕೆ ಅವಮಾನ ಮಾಡಿರುವುದು ಇಡೀ ಮಾನವಕುಲಕ್ಕೆ ಮಾಡಿದ ಅವಮಾನ. ಆರೋಪಿ ರಮಾಕಾಂತನನ್ನು ಕೂಡಲೇ ಪತ್ತೆ ಹಚ್ಚಿ ಅರೆಸ್ಟ್ ಮಾಡಬೇಕು. ಸೈಬರ್ ಕ್ರೈಂ ಅಡಿಯಲ್ಲಿ ಆತನ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.