Home ಜಿಲ್ಲೆ ಕಲಬುರಗಿ ಒಳಮೀಸಲಾತಿ ಇತ್ಯರ್ಥವಾಗುವತನಕ ಹಳೆಮೀಸಲಾತಿ ಜಾರಿಗೆ ಆಗ್ರಹ

ಒಳಮೀಸಲಾತಿ ಇತ್ಯರ್ಥವಾಗುವತನಕ ಹಳೆಮೀಸಲಾತಿ ಜಾರಿಗೆ ಆಗ್ರಹ

ಕಲಬುರಗಿ,ಮಾ. 17: ಒಳಮೀಸಲಾತಿ ಬಗ್ಗೆ ಇರುವ ಸಮಸ್ಯೆಗಳು,ಗೊಂದಲಗಳು, ಹಾಗೂ ಅಡತಡೆಗಳು ನಿವಾರಣೆಯಾಗುವವರೆಗೂ ಒಳಮೀಸಲಾತಿ ರಹಿತ ಹಳೆಮೀಸಲಾತಿಯನ್ನು ಜಾರಿಗೆ ತಂದು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ರಾಜ್ಯ ಸರಕಾರ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ ಅವರು ಆಗ್ರಹಿಸಿದರು.
ನಗರದ ಪತ್ರಿಕಾಭವನÀದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,ಒಳ ಮೀಸಲಾತಿಯನ್ನು ಅನುಷ್ಠಾನ ಮಾಡುವಾಗ ರೋಸ್ಟರ್‍ಬಿಂದುವಿನ ನಿರ್ವಹಣೆಯಿಂದ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಕರ್ನಾಟಕ ಆಡಳಿತ ಮಂಡಳಿಯು ಗೆಜೆಟೆಡ್ ಪೆÇ್ರೀಬೇಷನರಿ ಅಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಕೆ.ಪಿಎಸ್‍ಸಿಗೆ ನೀಡಿರುವ ತೀರ್ಪುನಲ್ಲಿ ಶೇ 17 ರ ಮೀಸಲಾತಿಯನ್ನು ರದ್ದುಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈಗಾಗಲೇ ಅಧಿಸೂಚನೆ ಹೊರಡಿಸಿರುವುದನ್ನು ಹೊರತುಪಡಿಸಿ ಯಾವುದೇ ಹೊಸ ಅಧಿಸೂಚನೆ ಹೊರಡಿಸದಂತೆ ತಡೆಯಾಜ್ಞೆ ನೀಡದೆ. 15+3ರ ಮೀಸಲಾತಿ ಜಾರಿಗೆ ತೊಂದರೆ ಇಲ್ಲ ಎಂದು ಮೌಖಿಕವಾಗಿ ತಿಳಿಸಿದೆ.ಅಲೆಮಾರಿ ಸಮುದಾಯವು ಒಳಮೀಸಲಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತು ವಿಧಿಸಿ ನೇಮಕಾತಿ ಮಾಡುವುದಕ್ಕೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಪ್ರವರ್ಗ ಎ.ಬಿ.ಸಿ. ಎಂದು ವರ್ಗೀಕರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂಉದ್ಯೋಗಾಕಾಂಕ್ಷಿಗಳು ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಒಳಮೀಸಲಾತಿಯ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಅಲ್ಲದೇ ಇತರೆ ಸಮುದಾಯದವರೆಗೂ ಉದ್ಯೋಗ ನೇಮಕಾತಿಯಲ್ಲಿ ಸಮಸ್ಯೆಯಾಗಿದ್ದು, ವಯೋಮಿತಿ ಮೀರಿದ ಅಭ್ಯರ್ಥಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದರು
ರಾಜ್ಯ ಸರಕಾರ 2025 ರ ಸಪ್ಟೆಂಬರ್ 3 ರಂದು ಹೊರಡಿಸಿದ ಮೀಸಲಾತಿ ಆದೇಶ ಪರಿಷ್ಕರಿಸಬೇಕು.ಪರಿಶಿಷ್ಟ ಜಾತಿಯ ಎಲ್ಲ ಪ್ರವರ್ಗಗಳಿಗೂ ಮೀಸಲಾತಿಯ ನಿಗದಿ 6+6+5 ರ ಪ್ರಮಾಣದಂತೆ ಹಂಚಿಕೆಯಾಗುವ ದೃಷ್ಠಿಯಂತೆ ನೇಮಕಾತಿ ಪ್ರಾಧಿಕಾರಿಗಳನ್ನು ಒಂದು ಘಟಕವಾಗಿ ಪರಿಗಣಿಸಬೇಕು.ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಸಂವಿಧಾನದ ಅನುಚ್ಛೇದ 15 ಮತ್ತು 16 ರಂತೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಒಳಮೀಸಲಾತಿಯನ್ನು ಸೀಮಿತಗೊಳಿಸುವಂತೆ ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ ಹಾದಿಮನಿ, ಬಿ.ಸಿ ವಾಲಿ, ಉಮೇಶ ನರೋಣಾ, ಕೃಷ್ಣಪ್ಪ ಕರಣಿಕ,ಎಚ್.ಶಂಕರ ಉಪಸ್ಥಿತರಿದ್ದರು.