ಪ್ರಜಾಪ್ರಭುತ್ವ ಉಳಿಸಲು ಆರ್‍ಎಸ್‍ಎಸ್ ನಿಷೇಧಕ್ಕೆ ಆಗ್ರಹ

ಜೇವರಗಿ,ಅ.21 : ಪ್ರಜಾಪ್ರಭುತ್ವ ಉಳಿಸಿ,ಆರ್ ಎಸ್ ಎಸ್ ನಿಷೇಧಿಸಿ ಹಾಗೂ ಸಚಿವ ಪ್ರಿಯಾಂಕ ಖರ್ಗೆಗೆ ಜೀವ ಬೆದರಿಕೆ ಹಾಕಿರುವವರನ್ನು ಕೂಡಲೇ ಗಡಿಪಾರು ಮಾಡಬೇಕು.ಸಚಿವ ಪ್ರಿಯಾಂಕ ಖರ್ಗೆಗೆ ಜಡ್ ಪ್ಲಸ್ ಭದ್ರತೆ ನೀಡಬೇಕುಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿ, ಪ್ರತಿಭಟನೆ ಕೈ ಬಿಟ್ಟು ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ನೀಡಿದರು.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ಶಾಂತಪ್ಪ ಕೂಡಲಗಿ,ಚಂದ್ರಶೇಖರ ಹರನಾಳ, ಸುರೇಶ್ ಹಾದಿಮನಿ,ಪ್ರಕಾಶ್ ಕಟ್ಡಿ,ಗೊಲ್ಲಾಳಪ್ಪ ಕಡಿ,ಮೊಯಿನೂದ್ದಿನ ಇನಾಂದಾರ,ಭೀಮರಾಯ ನಗನೂರ,ಮಲ್ಲಣ್ಣ ಕೊಡಚಿ,ಶ್ರೀಹರಿ ಕರಕಿಹಳ್ಳಿ,ವಿಶ್ವರಾದ್ಯ ಗಂವಾರ,ಸುನೀಲ್ ಚೆನ್ನೂರ,,ದವಲಪ್ಪ ಮದನ,ರವಿ ಕುರಳಗೇರಾ,ಸಿದ್ದು ಕೆರೂರ,ಮಾಪಣ್ಣ ಕಟ್ಟಿ,ಮಲ್ಲಿಕಾರ್ಜುನ ಕೆಲ್ಲೂರ,ಮಹೇಶ್ ಕೋಕಿಲೆ,ಶಿವಶರಣಪ್ಪ ಮಾರಡಗಿ,ಗುಂಡಪ್ಪ ಜಡಗಿ,ಶಿವಶರಣಪ್ಪ ಮಂದೆವಾಲ,ಪರಮಾನಂದ ಯಲಗೋಡ, ಯಶವಂತ ಬಡಿಗೇರ, ಶಿವಕುಮಾರ್ ಹೆಗಡೆ,ಶ್ರೀಮಂತ ಕಿಲ್ಲೆದಾರ,ಭಾಗಣ್ಣ ಸಿದ್ನಾಳ,ಗುರುಲಿಂಗಪ್ಪ ವುಡೂರ,ಸಿದ್ದು ಶರ್ಮಾ,ಭೀಮರಾಯ ಬಳಬಟ್ಟಿ, ವಿಶ್ವರಾಧ್ಯ ಗೋಪಾಲಕರ,ಭಾಗಣ್ಣ ಕಟ್ಟಿ, ಸುಭಾಷ ಕುಮ್ಮನಸಿರಸಗಿ ಸೇರಿದಂತೆ ಹಲವಾರು ಮುಖಂಡರು ಇದ್ದರು.