
ಮೈಸೂರು, ಅ.೨೯ : ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಹಾಗೂ ಸಂಪುಟಪುನ ರಚನೆ ಕುರಿತಾಗಿ ಭಾರಿ ಚರ್ಚೆಗಳು ನಡೆಯುತ್ತಿವೆ.
ಇದರ ಬೆನ್ನಲ್ಲೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಪೂರ್ಣಾವಧಿ ಸಿಎಂ ಎಂದು ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂಬಂಧ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಆರಂಭಿಸಿದ್ದು, ಕಾಂಗ್ರೆಸ್ ಹೈ ಕಮಾಂಡ್ ಗೆ ಪತ್ರ ಬರೆಯಲಾಗಿದೆ.
ಮೈಸೂರಿನಲ್ಲಿ ರಾಮಸ್ವಾಮಿ ಮೃತದಲ್ಲಿ ಅಹಿಂದ ಒಕ್ಕೂಟದಿಂದ ಈ ಒಂದು ಪತ್ರ ಚಳವಳಿ ಆರಂಭಿಸಿದ್ದು ಗೊಂದಲಗಳಿಗೆ ತೆರೆ ಎಳೆಯುವಂತೆ ಒತ್ತಾಯಿಸಲಾಯಿತು.
ಯಾರು ಮುಂದಿನ ಸಿಎಂ ಆಗ್ತಾರೆ, ಸಿಎಂ ರೇಸ್ ನಲ್ಲಿ ಯಾರು ಇದ್ದಾರೆ ಎಂದು ಸಾಕಷ್ಟು ಗೊಂದಲಗಳು ಮೂಡಿದ್ದು ಇವೆಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು.
ಹಾಗೆಯೇ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಸಿಎಂ ಎಂದು ಘೋಷಿಸಿ ಎಂದು ರಾಹುಲ್ ಗಾಂಧಿಗೆ ಪತ್ರದಲ್ಲಿ ಕೋರಲಾಗಿದೆ.

































