Home ಜಿಲ್ಲೆ ಕಲಬುರಗಿ ಮಹಾನಗರ ಪಾಲಿಕೆಗೆ ವಾಹನಗಳ ಲೋಕಾರ್ಪಣೆ

ಮಹಾನಗರ ಪಾಲಿಕೆಗೆ ವಾಹನಗಳ ಲೋಕಾರ್ಪಣೆ

ಕಲಬುರಗಿ,ಏ.10- ಮಹಾನಗರ ಪಾಲಿಕೆ ವತಿಯಿಂದ ನಗರದ ಸ್ವಚ್ಛತೆ ಹಾಗೂ ಆಡಳಿತದ ಹಿತದೃಷ್ಟಿಯಿಂದ ಪಾಲಿಕೆಯ ವಿವಿಧ ಅನುದಾನಗಳಡಿ ಈ ಕೆಳಕಂಡ ವಾಹನ ಯಂತ್ರೋಪಕರಣಗಳನ್ನು ಖರೀದಿಸಲಾಗಿತ್ತು.
ಆಟೋ ಟಿಪ್ಪರ್ (32) ರೂ 363.10 ಲಕ್ಷ., ಫ್ರಂಟ್ ಎಂಡ್ ಬ್ಯಾಕ್ ಹೋ ಲೋಡರ್ (3) ರೂ 120.25 ಲಕ್ಷ, ಟ್ರಾಕ್ಟರ್ – ( 07), ಟ್ರೈಲರ್ – (06) ರೂ 74.03 ಲಕ್ಷ., ಗಾರ್ಬೇಜ್ ಗ್ರ್ಯಾಬರ್ – (02) ರೂ 49.88 ಲಕ್ಷ ಒಟ್ಟು ಮೊತ್ತ ರೂ 607.37 ಲಕ್ಷ. ಮೌಲ್ಯದ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಎಂ ಎಲ್ ಎ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಪೂಜ್ಯ ಮಹಾಪೌರ ವರ್ಷಾ ಜಾನೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಕಾಪೆರ್Çೀರೇಷನ್ ಕಮೀಷನರ್ ಅವಿನಾಶ್ ಶಿಂಧೇ ಸೇರಿದಂತೆ ಹಲವರಿದ್ದರು.