
ಕೆಆರ್ ಪುರ,ಅ.೨೧- ಅಲ್ಪಸಂಖ್ಯಾತ ಬಾಂಧವರಿಗೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಲಿದೆ ಎಂದು ಉದಯನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಳಪ್ಪ ಅವರು ತಿಳಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಕ್ಷೇತ್ರದ ದೇವಸಂದ್ರ ವಾಡ್೯ನಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ.ವಸೀಂಪಾಷ ಅವರು ಏರ್ಪಡಿಸಿದ್ದ ಬಡ ಮಹಿಳೆಯರಿಗೆ ಸೀರೆ ಹಾಗೂ ಪಟಾಕಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು .
ದೇವಸಂದ್ರ ವಾಡ್೯ ನಲ್ಲಿ ಸುಮಾರು ಹತ್ತು ಹದಿನೈದು ವರ್ಷಗಳಿಂದ ಡಾ.ವಸೀಂಪಾಷ ಅವರು ಸಮಾಜ ಸೇವೆಮಾಡಿಕೊಂಡು ಬರುತ್ತಿದ್ದು, ಪ್ರತಿವರ್ಷ ದಂತೆ ಈ ವರ್ಷವು ದೀಪಾವಳಿ ಹಬ್ಬಕ್ಕೆ ಬಡವರಿಗೆ ಅನುಕೂಲವಾಗಬೇಕೆಂದು ಸೀರೆಗಳು ಹಾಗೂ ಪಟಾಕಿಗಳನ್ನು ವಿತರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ನಮ್ಮ ದೇಶ ಸರ್ವಧರ್ಮಗಳ ಶಾಂತಿಯ ನೆಲೆಯಾಗಿದ್ದು,ನಮ್ಮ ಪಕ್ಷ ಏಲ್ಲ ಧರ್ಮದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹೇಳಿದರು.
ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ.ವಸೀಂಪಾಷ ಅವರು ಮಾತನಾಡಿ ಪಕ್ಷ ಅವಕಾಶ ಮಾಡಿಕೊಟ್ಟರೆ ಜಿಬಿಎ ಚುನಾವಣೆಯಲ್ಲಿ
ಸ್ಪರ್ಧೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು.
ಸುಮಾರು ವಾಡ್೯ನ ನಾಲ್ಕು ಸಾವಿರ ಮಹಿಳೆಯರಿಗೆ ವಿತರಣೆ ಮಾಡಿ ಗ್ಯಾರವಿ ಹಬ್ಬ ಆಚರಿಸಿ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶೇಕ್ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ಪವನ್, ಉದಯನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನದೀಂ ಅಕ್ರಂ ಮುಖಂಡರಾದ ಚಾಂದ್ ಪಾಷ, ಮೆಹಬೂಬ್ ಪಾಷ, ರಘು, ಸುನ್ನ, ಮಹರೂಫ್ ಸೇರಿದಂತೆ ಇದ್ದರು.































