ಸಹಕಾರ ವಿಷಯದ ಚರ್ಚಾಸ್ಪರ್ಧೆ:ಬಹುಮಾನ ವಿತರಣೆ

ಕಲಬುರಗಿ,ಅ.10: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಗುಲಬರ್ಗಾ ವಿಶ್ವವಿದ್ಯಾಲಯ, ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಂತರ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಹಕಾರ ವಿಷಯ ಕುರಿತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳು ಸಹಕಾರ ಸಂಸ್ಥೆಗಳು ಸ್ವತಂತ್ರ, ಸ್ವಾಯತ್ತ ಹಾಗೂ ವೃತ್ತಿಪರತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಹಕಾರ ಚಳವಳಿಯ ಆರೋಗ್ಯಕರ ಅಭಿವೃದ್ಧಿ ಸಾಧ್ಯ.ಎಂದು ವಿಷಯದ ಮೇಲೆ ಪರ, ವಿರೋಧವಾಗಿ ಮಾತನಾಡಿದರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು “ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಒಂದು ಸಾಧನವೇ?” ಎಂಬ ವಿಷಯದ ಮೇಲೆ ಪರ, ವಿರೋಧವಾಗಿ ಮಾತನಾಡಿದರು.
ಅಂತರ ಮಹಾವಿದ್ಯಾಲಯ ವಿಜೇತ ವಿದ್ಯಾರ್ಥಿಗಳು (ಯು ಜಿ) ವಿಶಾಖಾ ಎಮ್-ಪ್ರಥಮ ಬಹುಮಾನ,ಪೂಜಾ ಎಮ್ – ದ್ವಿತೀಯ ಬಹುಮಾನಸ್ನಾತಕೋತ್ತರ ವಿಜೇತ ವಿದ್ಯಾರ್ಥಿಗಳಾದ (ಪಿ.ಜಿ)ಗೌರಿಪ್ರಿಯಾ ಬಿ _ಪ್ರಥಮ ಬಹುಮಾನ,ಅಣವೀರ ಎಮ್ – ದ್ವಿತೀಯ ಬಹುಮಾನ ಪಡೆದರು.
ಚರ್ಚಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಡಾ. ದೇವಿಂದ್ರಪ್ಪ ತೆಲ್ಕರ್, ಸುಭಾಶಚಂದ್ರ ಬರ್ಮಾ,ಟಿ. ಗುರುಬಸಪ್ಪ ಪಾಲ್ಗೊಂಡರು ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಮೇಶ ಲಂಡನಕರ್ ಇವರುಗಳು ಸಮಾರಂಭದಲ್ಲಿ ಪಾಲ್ಗೊಂಡಿದರು.ಅರುಣಕುಮಾರ ಬಿ. ಹರಸುರ್ ನಿರೂಪಣೆ ಮತ್ತು ಅತಿಥಿಗಳಿಗೆ ಸ್ವಾಗತ ಕೋರಿದರು. ಶ್ರೀಧರ ಕುಲಕರ್ಣಿ ವಂದನಾರ್ಪಣೆ ಮಾಡಿದರು.