ಡಿಸಿಸಿ ಬ್ಯಾಂಕ್ ೭೦ ಮಂದಿ ನಾಮಪತ್ರ ಸಲ್ಲಿಕೆ

ಕೋಲಾರ,ಮೇ,೨೧- ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಮೇ.೨೮ ರಂದು ನಡೆಯುವ ಚುನಾವಣೆ ಕಣ ರಂಗೇರಿದ್ದು, ಈಗಾಗಲೇ ಶಾಸಕರಾದ ರೂಪಕಲಾ ಶಶಿಧರ್, ಬಾಗೇಪಲ್ಲಿಯ ಸುಬ್ಬಾರೆಡ್ಡಿ ಕಣಕ್ಕಿಳಿದಿದ್ದು, ಇದೀಗ ಮಂಗಳವಾರ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಸಹ ನಾಮಪತ್ರ ಸಲ್ಲಿಸುವುದರೊಂದಿಗೆ ಒಟ್ಟು ೭೦ ಮಂದಿ ನಾಮಪತ್ರ ಸಲ್ಲಿಸಿದ್ದು, ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.


ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಾದ ಡಾ.ಮೈತ್ರಿಯವರಿಗೆ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಒಟ್ಟು ೨೨ ಮಂದಿ ನಾಮಪತ್ರ ಸಲ್ಲಿಸಿದ್ದು, ಭಾನುವಾರ ಕೆಜಿಎಫ್ ಶಾಸಕಿ ರೂಪಕಲಾ, ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸಂಸದ ಸುಧಾಕರ್ ಬೆಂಬಲಿತ ಮಂಜುನಾಥರೆಡ್ಡಿ ಸೇರಿದಂತೆ ಮೂವರು ನಾಮಪತ್ರ ಸಲ್ಲಿಸಿದ್ದರು.


ಇದಾದ ನಂತರ ಸೋಮವಾರ ನಾಮಪತ್ರಗಳನ್ನು ಸಲ್ಲಿಸಿದವರು, ಎ.ನಾಗರಾಜ ಶಿಡ್ಲಘಟ್ಟ-೨ ನಾಮಪತ್ರ, ಕೆ.ಶಿವಾನಂದ, ಕೋಲಾರ, ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ – ೨, ವಿ.ರಘುಪತಿರೆಡ್ಡಿ ಮುಳಬಾಗಿಲು-೨, ಎಂ.ಸಿ.ಸರ್ವಜ್ಞಗೌಡ ಮುಳಬಾಗಿಲು, ಜಿ.ಚಂದ್ರಾರೆಡ್ಡಿ ಚಿಂತಾಮಣಿ, ಎಸ್.ಪ್ರವೀಣ್‌ಕುಮಾರ್ ಕೆಜಿಎಫ್, ಕೆ.ಎನ್.ವೆಂಕಟರಾಮರೆಡ್ಡಿ ಗೌರಿಬಿದನೂರು, ಎಂ.ಆನಂದಕುಮಾರ್ ಕೋಲಾರ, ಕೆ.ವಿ.ದಯಾನಂದ ಕೋಲಾರ-೨. ಕೆ.ಎಚ್.ತಮ್ಮೇಗೌಡ ಚಿಕ್ಕಬಳ್ಳಾಪುರ – ೨, ಸಿ.ಎಚ್.ಲೆಂಕಪ್ಪ ಗೌರಿಬಿದನೂರು, ಆರ್.ಅಮರನಾರಾಯಣಪ್ಪ ಮುಳಬಾಗಿಲು, ಕೆ.ಎಸ್.ದ್ಯಾವಪ್ಪ ಚಿಕ್ಕಬಳ್ಳಾಪುರ-೨, ಹನುಮಂತರೆಡ್ಡಿ ಗೌರಿಬಿದನೂರು, ಎಂ.ಎನ್.ಕೃಷ್ಣಮೂರ್ತಿ ಚಿಕ್ಕಬಳ್ಳಾಪುರ -೨, ಎನ್.ಮಂಜುನಾಥ ಚಿಕ್ಕಬಳ್ಳಾಪುರ, ಕೆ.ಗುಡಿಯಪ್ಪ ಶಿಡ್ಲಘಟ್ಟ, ಎಸ್.ಜಿ.ಲಕ್ಷ್ಮೀನಾರಾಯಣಪ್ಪ ಗೌರಿಬಿದನೂರು, ಜೆ.ವಿ.ಹನುಮೇಗೌಡ ಮಂಚೇನಹಳ್ಳಿ, ಎಸ್.ಎನ್.ಚಿನ್ನಪ್ಪ ಚಿಂತಾಮಣಿ, ಎಸ್.ಪ್ರವೀಣ್‌ಕುಮಾರ್ ಕೆಜಿಎಫ್, ಬಿ.ಆರ್.ಶ್ರೀನಿವಾಸ್ ಮಾಲೂರು, ಡಿ.ಎನ್.ರಮೇಶ್ ಮಾಲೂರು, ಇ.ಮುನಿಸ್ವಾಮಿ ಮಾಲೂರು, ಎಸ್.ವಿ.ಗೋವರ್ಧನರೆಡ್ಡಿ ಮಾಲೂರು, ಪಿ.ಎನ್.ಜಗನ್ನಾಥ್ ಮಂಚೇನಹಳ್ಳಿ, ಎಂ.ರಾಮಯ್ಯ ಶಿಡ್ಲಘಟ್ಟ, ಕೆ.ಜೆ.ಆನಂದರೆಡ್ಡಿ ಗುಡಿಬಂಡೆ, ಬಿ.ಶೇಖರ್ ಚೇಳೂರು, ಎಸ್.ವಿ.ಸುಬ್ಬಾರೆಡ್ಡಿ ಗೌರಿಬಿದನೂರು, ಎನ್.ನಾಗಿರೆಡ್ಡಿ ಚಿಂತಾಮಣಿ ನಾಮಪತ್ರ ಸಲ್ಲಿಸಿದವರಾಗಿದ್ದಾರೆ.


ಮಂಗಳವಾರ ನಾಮಪತ್ರ ಸಲ್ಲಿಕೆ-
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಮಂಗಳವಾರ ನಾಮಪತ್ರ ಸಲ್ಲಿಸಿದವರೆಂದರೆ ಹೆಚ್.ವಿ.ವಿನೋದ್ ಕುಮಾರ್, ಕೆ.ವಿ.ಭಾಸ್ಕರರೆಡ್ಡಿ,ಬಿ.ವಿ.ಅಕ್ಕಲರೆಡ್ಡಿ, ಬಿ.ಸಿ.ನಾಗೇಶ್, ಪಿ.ಎನ್.ಮುನೇಗೌಡ, ಜಿ.ಚಂದ್ರಾರೆಡ್ಡಿ, ಎನ್.ಎಂ.ಸುಬ್ಬಾರೆಡ್ಡಿ, ಎನ್.ನಾಗಿರೆಡ್ಡಿ, ಎಸ್.ಆರ್.ಮುರಳಿಗೌಡ, ಜಿ.ಮಂಜುನಾಥ್ , ಜಿ.ಮಂಜುನಾಥ, ಕೆ.ಎಂ.ಮುನಿರಾಜ, ಕೆ.ಎಂ.ಮುನಿರಾಮ, ಎಂ.ಶ್ರೀನಿವಾಸಪ್ಪ, ಎ.ಸಿ.ನಾಗರತ್ನ, ಡಿ.ಹೆಚ್.ನಾಗರಾಜ್, ಕೆ.ಎನ್.ರಂಗನಾಥಾಚಾರಿ, ವಿ.ಮಾರ್ಕಂಡೇಗೌಡ, ಪಿ.ಮುತ್ತಿರೆಡ್ಡಿ, ಪಿ.ಎನ್.ಮಂಜುನಾಥರೆಡ್ಡಿ, ಪಿ.ಸುರೇಶ್, ಬಿ.ಎಸ್.ಶಶಿಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.