Home ಜಿಲ್ಲೆ ಕಲಬುರಗಿ ಸಮ-ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ದಾಸಿಮಯ್ಯ

ಸಮ-ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ದಾಸಿಮಯ್ಯ

ಕಲಬುರಗಿ:ಮಾ.23: ದೇವರ ದಾಸಿಮಯ್ಯ ಅವರು ನೇಯ್ಗೆ ಕಾಯಕ ಮಾಡುವದರ ಜೊತೆಗೆ, ಮೌಢ್ಯತೆ, ಕಂದಾಚಾರ, ಅಂದಶೃದ್ಧೆ, ಜಾತಿಯತೆ, ಶೋಷಣೆ, ಅನ್ಯಾಯದಂತಹ ಪಿಡುಗುಗಳಿಂದ ತೂತು ಬಿದ್ದ ಸಮಾಜವನ್ನು ತಮ್ಮ ವಚನಗಳ ಮೂಲಕ ನೇಯುವ ಕಾರ್ಯ ಮಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಟ ಶರಣರಾಗಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಶರಣ ದೇವರ ದಾಸಿಮಯ್ಯನವರ 1047ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ನೆಮ್ಮದಿ, ಸಮೃದ್ಧಯುತ ಜೀವನ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾದ, ಸಮಾಜದಲ್ಲಿ ಒಂದು ಅಮೂಲಾಗ್ರಹವಾದ ಬದಲಾವಣೆಗೆ ಕಾರಣವಾದ ‘ವಚನ ಚಳುವಳಿ’ಗೆ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ‘ರಾಮನಾಥ’ ಎಂಬ ಅಂಕಿತ ನಾಮದೊಂದಿಗೆ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ, ಶಿಕ್ಷಕ ಆದರ್ಶ ವಡ್ಡನಕೇರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.