ದ.ರಾ. ಬೇಂದ್ರೆಯವರ ಜನ್ಮ ದಿನಾಚರಣೆ

ಧಾರವಾಡ,ಜ31: ಸಂಸ್ಕಾರ ಭಾರತಿ ಧಾರವಾಡ ಇವರ ವತಿಯಿಂದ ಅಂಬಿಕಾತನಯದತ್ತ ಕಾವ್ಯನಾಮದಿಂದ ಜನಜನಿತರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ “ದ.ರಾ.ಬೇಂದ್ರೆ” ಅವರ 130 ನೇ ಜನ್ಮದಿನ ಹಾಗೂ ಭರತಮುನಿ ಜಯಂತಿಯ ಅಂಗವಾಗಿ ಧಾರವಾಡದ ಪೆÇೀಡ್ನಿಸ್ ಗಲ್ಲಿಯಲ್ಲಿರುವ ದ.ರಾ. ಬೇಂದ್ರೆ ಅವರ ಮನೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಜನ್ಮ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಈರೇಶ.ಅಂಚಟಗೇರಿ, ಪಾಲಿಕೆಯ ಸದಸ್ಯರಾದ ಶಂಕರ.ಶೇಳಕೆ, ದೀಪಾ.ನೀರಲಕಟ್ಟಿ, ನಿರ್ಮಲಾ ಜವಳಿ, ಸೌಭಾಗ್ಯ.ಕುಲಕರ್ಣಿ, ಉದಯ.ಇಂಡಿಗೇರಿ, ಶಶಿಧರ.ನರೇಂದ್ರ, ಶಿವಾನಂದ.ಜವಳಿ, ಡಾ.ಡಿ.ಎಮ್.ಹಿರೇಮಠ, ಈರಣ್ಣ.ಪತ್ತಾರ, ಆನಂದ.ಕುಲಕರ್ಣಿ, ಶ್ರೀಧರ.ಕುಲಕರ್ಣಿ ಇದ್ದರು.