
ಕಲಬುರಗಿ,ಜ.3-ಕೇಂದ್ರಿಯ ಕರ್ನಾಟಕ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದವತಿಯಿಂದ ಸಿಎಸ್-ಐಥಾನ್ 2026, ರಾಷ್ಟ್ರೀಯ ಮಟ್ಟದ ಹ್ಯಾಕಥಾನ್, ಉದ್ಘಾಟಿಸಲಾಯಿತು.
ಕಂಪ್ಯೂಟರ್ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಹೊಸತನ, ಸೃಜನಶೀಲತೆ ಮತ್ತು ಸಮಸ್ಯಾ ಪರಿಹಾರ ಕೌಶಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಹ್ಯಾಕಥಾನ್ ಅನ್ನು ಭಾರತ ಸರ್ಕಾರದ ಂI Imಠಿಚಿಛಿಣ Summiಣ-2026ರ ಅಂಗವಾಗಿ Pಡಿe-Summiಣ ಇveಟಿಣರೂಪದಲ್ಲಿ ನಡೆಸಲಾಯಿತು.
ಹ್ಯಾಕಥಾನ್ನ ಮೊದಲ ಹಂತದಲ್ಲಿ 102 ತಂಡಗಳು, ಸುಮಾರು 300 ವಿದ್ಯಾರ್ಥಿಗಳನ್ನು ಒಳಗೊಂಡು, ದೇಶದ ವಿವಿಧ ರಾಜ್ಯಗಳಿಂದ ಸಾರಾಂಶಗಳನ್ನು ಸಲ್ಲಿಸಿದ್ದರು.
ಮೌಲ್ಯಮಾಪನದ ನಂತರ ಸುಮಾರು 120 ವಿದ್ಯಾರ್ಥಿಗಳನ್ನೊಳಗೊಂಡ 40 ತಂಡಗಳನ್ನುಆಫ್ಲೈನ್ ಆನ್-ಕ್ಯಾಂಪಸ್ ಹಂತಕ್ಕೆ ಆಯ್ಕೆ ಮಾಡಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳು ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ ಮತ್ತು ಕೇರಳರಾಜ್ಯಗಳಿಂದ ಆಗಮಿಸಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಹಾಡಲಾದ ರಾಷ್ಟ್ರಗೀತೆಯೊಂದಿಗೆಆರಂಭಗೊಂಡು, ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಪೆÇ್ರ.ಶ್ರೀಕಾಂತಯ್ಯ ಕೆ.ಸಿ., ಮುಖ್ಯಸ್ಥ ಮತ್ತು ಡೀನ್, ಕಂಪ್ಯೂಟರ್ ಸೈನ್ಸ್ ಶಾಲೆ, ಸ್ವಾಗತ ಭಾಷಣ ಮಾಡಿದರು. ನಂತರ ಡಾ. ನಾಗರಾಜ ವಿ. ಧಾರವಾಡಕರ್, ನೋಡಲ್ ಅಧಿಕಾರಿ, ಹ್ಯಾಕಥಾನ್ ಕುರಿತು ಪರಿಚಯ ನೀಡಿದರು.
ಮುಖ್ಯ ಅತಿಥಿ ಡಾ. ಚಂದ್ರಶೇಖರ ಬುದ್ಧ, ಸಿಇಒ, ಅನುವಾದಿನಿ ಎಐ ಮತ್ತು ಎಐಸಿಟಿಇ ಮುಖ್ಯ ಸಂಯೋಜನಾ ಅಧಿಕಾರಿ, ಸ್ವದೇಶಿ ಮತ್ತು ಸುರಕ್ಷಿತ ಡಿಜಿಟಲ್ ವೇದಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳಿಗೆ ಭಾರತ ಕೇಂದ್ರಿತ ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೇರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೆÇ್ರ. ಬಟ್ಟು ಸತ್ಯನಾರಾಯಣ, ಮಾನ್ಯ ಕುಲಪತಿ, ಸಿಯುಕೆ, ಡಿಜಿಟಲೀಕರಣ, ಸ್ಮಾರ್ಟ್ ಕೃಷಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನಗಳ ಪಾತ್ರವನ್ನು ವಿವರಿಸಿ, ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆಗಳನ್ನು ವಿಕಾಸಿತ ಭಾರತ-2047ನ ಪ್ರಾಯೋಗಿಕ ಪರಿಹಾರಗಳಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವು ಡಾ. ರಾಕೇಶ್ ಕುಮಾರ್ ಗೋಧಿ, ಹ್ಯಾಕಥಾನ್ ಸಂಯೋಜಕರು, ಅವರ ಧನ್ಯವಾದ ನಿರೂಪಣೆಯೊಂದಿಗೆ ಸಮಾಪ್ತಿಗೊಂಡಿತು.

























