ಕ್ರೂಜರ್-ಬೈಕ್ ಡಿಕ್ಕಿ: ಒಬ್ಬ ಸಾವು, ಇಬ್ಬರಿಗೆ ಗಂಭೀರ ಗಾಯ

ಕಮಲಾಪುರ,ಸೆ.11-ಕ್ರೂಜರ್-ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಚೇಂಗಟಾ ಸಮೀಪದ ಅಡಕಿಮೋಕ ತಾಂಡಾ ಬಳಿ ನಡೆದಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕ್ರೂಜರ್ ಹಾಯಿಸಿ ಕೊಲೆಗೈಯ್ಯಲಾಗಿದೆ ಎಂದು ಮೃತ ಯುವಕನ ಪಾಲಕರು ರಟಕಲ್ ಪೆÇಲೀಸ ಠಾಣೆಗೆ ದೂರು ನೀಡಿದ್ದಾರೆ.
ಅಡಕಿಮೋಕ ತಾಂಡಾದ ವಿಶಾಲ (ಡಿಜೆ ವಿಶಾಲ) ತಂದೆ ಕಿಶನ ರಾಠೋಡ (22) ಮೃತ ಯುವಕನಾಗಿದ್ದು, ಅನಿತಾಬಾಯಿ ಗಂಡ ಅಂಬು, ಪಾರ್ವತಿಬಾಯಿ ಗಂಡ ಅಂಬು ಗಂಭೀರ ಗಾಯಗೊಂಡಿದ್ದಾರೆ.
ಮೃತ ವಿಶಾಲ ಹಾಗೂ ಅನಿತಾಬಾಯಿ, ಪಾರ್ವತಿಬಾಯಿ ಬೈಕ್ ಮೂಲಕ ಅಡಕಿಮೋಕ ತಾಂಡಾದಿಂದ ಚೇಂಗಟಾ ಗ್ರಾಮಕ್ಕೆ ತೆರಳುತ್ತಿದ್ದರು.
ಇದೇ ತಾಂಡಾದ ನಿವಾಸಿ ಕ್ರೂಜರ್ ಚಾಲಕ ಸಿತಾರಾಮ ರಾಠೋಡ ಎದುರಿಗೆ ಬಂದು ಕ್ರೂಜರ್ ಹಾಯಿಸಿದ್ದಾನೆ ಎಂದು ಮೃತ ವಿಶಾಲ ತಂದೆ ಕಿಶನ ರಾಠೋಡ ರಟಕಲ್ ಪೆÇಲೀಸ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ವಿಶಾಲನ ಭಾವನ ಟಂಟಂ ಪಲ್ಟಿಯಾಗಿತ್ತು. ಅದರಲ್ಲಿ ಸಿತಾರಾಮನ ತಾಯಿ ಶಾಂತಾಬಾಯಿ ಮೃತಪಟ್ಟಿದ್ದಳು. ವಿಶಾಲನ ಕುಟುಂಬಸ್ಥರಿಗೂ ಗಾಯಗಳಾಗಿದ್ದವು. ಆದರೆ ಸೀತಾರಾಮ ಮಾತ್ರ ನನ್ನ ತಾಯಿಯನ್ನು ನೀವು ಉದ್ದೇಶಪೂರ್ವಕವಾಗಿ ಕೊಲೆಗೈದಿದ್ದಿರಿ ಎಂದು ಹಗೆ ಸಾಧಿಸುತ್ತಿದ್ದ. ಅನಿತಾಬಾಯಿ, ಪಾರ್ವತಿಬಾಯಿ ಹಾಗೂ ಇವರಿಬ್ಬರ ಪತಿಯಾದ ಅಂಬು ಎರಡು ದಿನಗಳಿಂದ ಸೀತಾರಾಮ ಜೊತೆ ಜಗಳ ಮಾಡುತ್ತಿದ್ದ. ಸೀತಾರಾಮನ ಮಗ ಪಾರ್ವತಿಬಾಯಿ ಮಗಳಿಗೆ ಕಿರುಕುಳ ನೀಡುತ್ತಿದ್ದ. ಈ ವಿಷಯಕ್ಕೆ ಕಲಹ ಆರಂಭವಾಗಿತ್ತು. ಅನಿತಾಬಾಯಿ, ಅಂಬುಬಾಯಿ ವಿಶಾಲನ ಬೈಕ್ ಮೇಲೆಯೆ ತನ್ನ ಮಗಳಿಗೆ ಭೇಟಿಯಾಗಲು ಚೇಂಗಟಾ ಶಾಲೆಗೆ ತೆರಳುತ್ತಿದ್ದರು. ಕ್ರೂಜರ್ ಚಲಾಯಿಸಿಕೊಂಡು ಎದರುಗೆ ಬಂದ ಸೀತಾರಮ ಉದ್ದೇಶಪೂರ್ವಕವಾಗಿ ಬೈಕ್ ಮೇಲೆ ತೆರಳುತ್ತದ್ದ ವಿಶಾಲ, ಅನಿತಾಬಾಯಿ, ಪಾರ್ವತಿಬಾಯಿ ಮೇಲೆ ಹರಿಸಿದ್ದಾನೆ. ಈ ಹಿಂದೆಯೂ ವಿಶಾಲ ಹಾಗೂ ಸಿತಾರಾಮ ನಡುವೆ ಕಲಹವಾಗಿತ್ತು. ವಿಶಾಲನನ್ನು ಕೊಲೆ ಮಾಡುವುದಾಗಿ ಪದೇ ಪದೇ ಸೀತಾರಾಮ ಬೆದರಿಕೆಯೊಡ್ಡುತ್ತಿದ್ದ. ಅದರಂತೆ ಇಂದು ಕ್ರೂಜರ್ ಹಾಯಿಸಿ ಕೊಲೆಗೈದಿದ್ದಾನೆ ಎಂದು ವಿಶಾಲ ತಂದೆಯಾದ ಕಿಶನ ದೂರಿದ್ದಾರೆ. ವಿಶಾಲ ಒಬ್ಬನೆ ಮಗನಾಗಿದ್ದು, ತಂದೆ, ತಾಯಿ ಐವರು ಸಹೋದರಿಯರಿದ್ದಾರೆ. ಗಂಭೀರ ಗಾಯಗೊಂಡ ಅನಿತಾಬಾಯಿ, ಪಾರ್ವತಿಬಾಯಿ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಟಕಲ್ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‍ಪಿ ಶಂಕರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.