
ನವಲಗುಂದ,ಮಾ.೧೨: ಪಟ್ಟಣದ ಶ್ರೀ ಸಂಸ್ಥಾನ ಪಂಚಗ್ರಹ ಹಿರೇಮಠದ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವವನ್ನು ಮೇ.೧೨ಮತ್ತು ೧೩ರಂದು ಜರುಗಿಸಲಾಗುವುದು ಈ ಕಾರ್ಯಕ್ರಮದಲ್ಲಿ ಪಂಚಪೀಠಾಧೀಶ್ವರರು ಭಾಗಿಯಾಗುವರು ಎಂದು ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪಟ್ಟಾಧಿಕಾರ ಮಹೋತ್ಸವದ ಮೊದಲು ಮೇ.೦೧ರಿಂದ ಮನಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹನ್ನೊಂದು ದಿನಗಳ ಕಾಲ ಪ್ರವಚನ ನಡೆಯುವದು. ಅಲ್ಲದೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗುವುದು ಮಠದ ಸದ್ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಪಟ್ಟಾಧಿಕಾರ ಮಹೋತ್ಸವದ ಪತ್ರಿಕೆ ಹಾಗೂ ದೇಣಿಗೆ ರಸೀದಿ ಬಿಡುಗಡೆ ಮಾಡುವ ಮೂಲಕ ಮಹೋತ್ಸವದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿಯೋಜಿತ ಉತ್ತರಾಧಿಕಾರಿ ವೀರಬಸವದೇವರು, ಪಾಂಡಪ್ಪ ಕೋನರೆಡ್ಡಿ, ಬಾಬಾಜಾನ್ ಮುಲ್ಲಾ, ಅಣ್ಣಪ್ಪ ಬಾಗಿ, ಹುಚ್ಚಪ್ಪ ಭೋವಿ, ಕಲ್ಲಯ್ಯ ಹೊಸಮನಿ, ಅಪ್ಪಣ್ಣ ಹಳ್ಳದ, ಶ್ರೀಶೈಲ ಮೂಲಿಮನಿ, ಶಿವಾಜಿ ಕಲಾಲ, ಶರ್ಮಾ ಹಿರೇಮಠ, ವೀರೇಶ ಜಾವೂರಮಠ, ಎಂ.ಡಿ.ಕುಲಕರ್ಣಿ, ಯಲ್ಲಪ್ಪಗೌಡ ಪಾಟೀಲ, ಕೊಟ್ರೇಶ ಹಿರೇಮಠ, ಶಂಕರಗೌಡ ಪಾಟೀಲ, ಈರಣ್ಣ ಚವಡಿ, ಗಂಗಾಧರ ಹಳ್ಳದ, ಆರ್.ಎಚ್.ನೇಗಲಿ, ಯಲ್ಲಪ್ಪ ಭೋವಿ, ಮಲ್ಲಿಕಾರ್ಜುನ ಜಲಾಧಿ, ಬಾಬು ಹುರಕಡ್ಲಿ, ಶಂಕರಯ್ಯ ಸುಬೇದಾರಮಠ ಸೇರಿದಂತೆ ಅನೇಕರು ಇದ್ದರು

























