
ಕಲಬುರಗಿ,ಮಾ.27-ಆತ್ಮಹತ್ಯೆಗೆ ಕಾರಣನಾಗಿದ್ದ ಅಪರಾಧಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯ ಗುರುವಾರ ತೀರ್ವ ನೀಡಿದೆ.
ಶರಣ ಶಿರಸಗಿ ತಾಂಡಾದ ನಿವಾಸಿ ಮಾಳಪ್ಪ ತಂದೆ ಮಹಾಂತಪ್ಪ ಅಂಕಲಗಿ ಶಿಕ್ಷೆಗೆ ಒಳಗಾದ ಅಪರಾಧಿ.
ಈತ ಶರಣ ಶಿರಸಗಿ ತಾಂಡಾದ ಭಾಗ್ಯಶ್ರೀಗೆ ಪ್ರೀತಿಸುವಂತೆ ಪೀಡಿಸಿ, ಮದುವೆಯಾಗದಿದ್ದರೆ ಫೆÇೀಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಕಾರಣವಾಗಿದ್ದ.
ನಗರದ ಮಹಿಳಾ ಪೆÇಲೀಸ್ ಠಾಣಾ ವ್ಯಾಪ್ತಿಯ ಶರಣ ಶಿರಸಗಿಯ ಭಾಗ್ಯಶ್ರೀ ಎಂಬ ಯುವತಿಯನ್ನು ಪ್ರೀತಿಸುವಂತೆ ಸತಾಯಿಸುತ್ತಿದ್ದನು. ಮೊಬೈಲ್‍ನಲ್ಲಿ ಫೆÇೀಟೋಗಳನ್ನು ಪಡೆದುಕೊಂಡು, ನೀನು ನನ್ನನ್ನೇ ಮದುವೆಯಾಗಬೇಕು, ಇಲ್ಲದಿದ್ದರೆ ನಿನ್ನ ಫೆÇೀಟೋಗಳನ್ನು ವಾಟ್ಸಾಪ್‍ನಲ್ಲಿ ಎಲ್ಲರಿಗೂ ಕಳುಹಿಸಿ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದನು. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಕುರಿತು ಮಹಿಳಾ ಠಾಣೆಯ ತನಿಖಾಧಿಕಾರಿ ಸಂಗಮೇಶ ಪಾಟೀಲ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎಲ್. ಲಕ್ಷ್ಮೀನಾರಾಯಣ ಅವರು ವಾದ ವಿವಾದ
ಆಲಿಸಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. 20,000 ರೂ. ಮೃತ ಯುವತಿಯ ತಾಯಿಗೆ ನೀಡಬೇಕು ಹಾಗೂ ಉಳಿದ
5000 ರೂಗಳನ್ನು ಸರಕಾರಕ್ಕೆ ಜಮಾ ಮಾಡಲು ತಿಳಿಸಿದ್ದಾರೆ.
ಸರಕಾರದ ಪರವಾಗಿ ಪ್ರಭಾರ ಸರಕಾರಿ ಅಭಿಯೋಜಕ ಎನ್.ಆರ್.ನರಸಿಂಹಲು ವಾದ ಮಂಡಿಸಿದ್ದರು.



























