ಗುತ್ತಿಗೆದಾರರು ಒಳ್ಳೆಯ ರಸ್ತೆ ನಿರ್ಮಿಸಿ ಜನರ ನಂಬಿಕೆ ಉಳಿಸಿಕೊಳ್ಳಿ ; ಎಂ.ವೈ.ಪಾಟೀಲ

ಅಫಜಲಪುರ: ಡಿ.5:ಮತಕ್ಷೇತ್ರದ ಗ್ರಾಮೀಣ ಭಾಗಗಳ
ರಸ್ತೆಗಳ ಸುಧಾರಣೆ ಮತ್ತು ಅಭಿವೃದ್ಧಿಗೆ ಮೊದಲ
ಆದ್ಯತೆ ನೀಡುತ್ತಿದ್ದೇನೆ ಎಂದು ಶಾಸಕ ಎಂ.ವೈ ಪಾಟೀಲ
ಹೇಳಿದರು.

ತಾಲೂಕಿನ ನಿಲೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2024-25ರ 5054 ರಾಜ್ಯ ಹೆದ್ದಾರಿ ಯೋಜನೆ ಅಡಿಯಲ್ಲಿ ಮೂರು ಮಹತ್ವದ
ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು
ಮಾತನಾಡಿ, ಸಂಪರ್ಕ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಿದರೆ ವ್ಯಾಪಾರ ಮಹಿವಾಟು, ವಿದ್ಯಾರ್ಥಿಗಳು,
ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ.
ಅಲ್ಲದೆ, ಗ್ರಾಮಗಳು ಕೂಡ ಸವಾರ್ಂಗೀಣ
ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ
ತಾಲೂಕಿನಾದ್ಯಂತ ಗ್ರಾಮೀಣ ರಸ್ತೆಗಳನ್ನು
ಸುಧಾರಿಸುವ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಪಾಟೀಲ ತಿಳಿಸಿದರು.

ಸಂಪರ್ಕ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಿದರೆ
ವ್ಯಾಪಾರ ಮಹಿವಾಟು, ವಿದ್ಯಾರ್ಥಿಗಳು,
ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ.
ಅಲ್ಲದೆ ಗ್ರಾಮಗಳು ಕೂಡ ಸವಾರ್ಂಗೀಣವಾಗಿ
ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಹೀಗಾಗಿ
ತಾಲೂಕಿನಾದ್ಯಂತ ಗ್ರಾಮೀಣ ರಸ್ತೆಗಳನ್ನು
ಸುಧಾರಿಸುವ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದ್ದೇನೆ.
ಲೋಕೋಪಯೋಗಿ ಇಲಾಖೆಯ ವತಿಯಿಂದ
ಕೋಟಿ ವೆಚ್ಚದಲ್ಲಿ ಪಟ್ಟಣ ಕ್ರಾಸ್‍ನಿಂದ ನಾರಯಣಪೂರ
ರಸ್ತೆ ಸೇರಿದಂತೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆಗೆ
ಕ್ರಮ ವಹಿಸಲಾಗಿದೆ. ಗುತ್ತಿಗೆದಾರರು ಒಳ್ಳೆಯ ರಸ್ತೆ ನಿರ್ಮಿಸಿ ಜನರ ನಂಬಿಕೆ ಉಳಿಸಿಕೊಳ್ಳಿ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಹಣಮಂತ್ರಾಯ ಪಾಟೀಲ್, ಕೃಷ್ಣ ಬೀಲ್ಕರ್, ಸಾತಲಿಂಗಪ್ಪ ಲೋಣಿ, ಭೀಮಶಾ ನಾಯ್ಕಡಿ,
ಶರಣು ಹಾಳಮಳ್ಳಿ, ಗುಡುರ ಗ್ರಾ.ಪಂ ಅಧ್ಯಕ್ಷ
ಭೀಮಾಶಂಕರ ಪಗಡೆ, ಅಜಯ್ ಬೀಲ್ಕರ್, ಜಗದೇವಪ್ಪ
ಪಾಟೀಲ, ಪಿಡ್ ಬ್ಲೂಡಿ ಇಲಾಖೆ ಎಇಇ ಲಕ್ಷ್ಮೀಕಾಂತ
ಬಿರಾದಾರ, ಜೆಇ ಮಾರುತಿ ಹಾಗೂ ಇನ್ನಿತರರು ಇದ್ದರು.