
ಇಂಡಿ:ಜೂ.೨೫: ಕುಟುಂಬ ರಾಜಕಾರಣ ಇರುವ ಕಾರಣ ಕಾಂಗ್ರೆಸ್ ಪಕ್ಷದಿಂದ ದೇಶದ ಅಭಿವೃದ್ಧಿಯಾಗಿಲ್ಲ. ಬದಲಿಗೆ ತಮ್ಮ ಕುಟುಂಬದ ಅಭಿವೃದ್ಧಿ ಮಾಡುವುದರಲ್ಲಿಯೇ ಕಾಂಗ್ರೆಸ್ ನಾಯಕರು ಕಾಲ ಕಳೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.
ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ೧೧ ವರ್ಷ ಪೂರೈಸಿದ ಪ್ರಯುಕ್ತ ಇಂಡಿ ಮಂಡಲದಿAದ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮೋದಿ ಒಬ್ಬರು ದೈವೀ ಪುರುಷ ಅವರನ್ನು ಯಾರೂ ಏನು ಮಾಡಲು ಆಗುವುದಿಲ್ಲ. ಸಮೃದ್ಧ ದೇಶ ಕಟ್ಟುವಲ್ಲಿ ಮೋದಿ ಪಾತ್ರ ಅನನ್ಯವಾಗಿದೆ. ದೇಶಕ್ಕೆ ಮೋದಿ ಕೊಡುಗೆ ಏನು ಎಂದು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೂನ್ಯ ಎಂಬ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯ ಆಡಳಿತ ನೀಡುತ್ತಿದ್ದು, ಆ ಶೂನ್ಯ ಎಂಬ ಪದ ಅವರ ಬಾಯಲ್ಲಿ ಬಾಯಪಾಠ ಆಗಿಬಿಟ್ಟಿದೆ ಎಂದ ಅವರು, ರಾಜ್ಯದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದರು
ಪಕ್ಷದ ಬಹುತೇಕ ಶಾಸಕರಿಗೆ ಅನುದಾನ ನೀಡುತ್ತಿಲ್ಲವಾದ್ದರಿಂದ ತಮ್ಮ ಶಾಸಕರೇ ಪಕ್ಷದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸಿನ ದೊಡ್ಡ ಸಾಧನೆಯಾಗಿದೆ ಎಂದು ಆರೋಪಿಸಿದ ಅವರು, ಇಂಡಿ ಹಾಗೂ ಸಿಂದಗಿ ಭಾಗಕ್ಕೆ ನೀರಾವರಿ ಯೋಜನೆಯ ಸಲುವಾಗಿ ನಾನು ದೇವೇಗೌಡರು ಪ್ರಧಾನ ಮಂತ್ರಿ ಇದ್ದಾಗ ಅವರ ಕೈಕಾಲು ಹಿಡಿದು ೬೦ ಕೋಟಿ ರೂಪಾಯಿ ಅನುದಾನ ತಂದಿದ್ದೆ. ಈಗ ಆ ಕಾಲುವೆಗಳು ದುಸ್ಥಿತಿಗೆ ತಲುಪಿದ್ದು ಅವುಗಳನ್ನು ರಿಪೇರಿ ಮಾಡಲು ಸಹ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ, ಹೀಗಿದ್ದರೆ ನಮ್ಮ ರೈತರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ನಾನು ಮೋದಿ ಸಾಹೇಬರಿಗೆ ನಮ್ಮ ಕ್ಷೇತ್ರದ ಇಂಡಿ-ಸಿAದಗಿ ಕಾಲುವೆ ಪುನರ್ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಸನ್ಮಾನ್ಯ ಮೋದಿಜಿ ಅವರು ೨೬೬೬ ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದಾರೆ ಎಂದರು.
ಕೆಲ ಶಾಸಕರು ಇತ್ತೀಚೆಗೆ ಪತ್ರ ಬರೆದಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದ್ದು, ನಾನು ೨೦೨೪ರಲ್ಲಿ ನರೇಂದ್ರ ಮೋದಿಯವರಿಗೆ ಅನುದಾನ ನೀಡುವಂತೆ ಪತ್ರ ಬರೆದಿದ್ದೇನೆ. ತದನಂತರ ಸಿಡಬ್ಲ್ಯೂಸಿ ಮೀಟಿಂಗಿಗೆ ನನ್ನನ್ನು ಆಹ್ವಾನಿಸಿದ್ದು ನಾನು ಖುದ್ದಾಗಿ ಹೋಗಿ ಆ ಮೀಟಿಂಗ್ನಲ್ಲಿ ನಮ್ಮ ಫೈಲ್ ಅನ್ನು ಪಾಸ್ ಮಾಡಿಸಿದ್ದೇನೆ, ಯಾವ ಸ್ಥಳದಲ್ಲಿ ನಿಂತು ಹೇಳು ಎಂದರೂ ನಾನು ಧೈರ್ಯವಾಗಿ ಹೇಳುತ್ತೇನೆ. ಈ ಕಾಲುವೆಗೆ ಅನುದಾನ ನೀಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಎಂದರು.
ಕಾAಗ್ರೆಸ್ ಆಡಳಿತ ಅವಧಿಯಲ್ಲಿ ೨೦೧೧ರಲ್ಲಿ ನಮ್ಮ ದೇಶದ ಬಡತನದ ರೇಖೆ ಪ್ರತಿಶತ ೨೭.೫ ರಷ್ಟು ಇತ್ತು ಆದರೆ ಈಗ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದಲ್ಲಿ ನಮ್ಮ ದೇಶದ ಬಡತನ ರೇಖೆಯ ಪ್ರತಿಶಥ ೫.೩ ರಷ್ಟು ಮಾತ್ರ ಇದೆ. ಆರ್ಥಿಕವಾಗಿ ನಮ್ಮ ದೇಶ ಈಗ ಸದೃಢವಾಗಿದ್ದು ವಿಶ್ವದಲ್ಲಿಯೇ ಆರ್ಥಿಕ ಮೂರನೇ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ವಿಜಯಪುರ ಜಿಲ್ಲೆಗೆ ಒಟ್ಟು ೬ ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡಿಸಿ ಕೆಲಸ ಮಾಡಿದ್ದೇನೆ ಜಿಲ್ಲೆಗೆ ೧ ಲಕ್ಷ ೨೦ ಸಾವಿರ ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ, ಆದರೆ ನಾನು ಯಾವುದಕ್ಕೂ ಸಹ ಹೇಳಿಕೊಂಡಿಲ್ಲ. ಜಲಜೀವನ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಿದ್ದರೂ ಸಹ ಜಿಲ್ಲೆಯ ಶಾಸಕರು ನನಗೆ ಕಾಮಗಾರಿಯ ಪೂಜೆಗೆ ಸಹ ಕರೆದಿಲ್ಲ ಆದರೂ ಸಹ ಅಭಿವೃದ್ಧಿಗೆ ನಾನು ಯಾರಿಗೂ ಪ್ರಶ್ನೆ ಮಾಡಿಲ್ಲ ನನ್ನನ್ನು ಏಕೆ ಕರೆದಿಲ್ಲ ಎಂದು ಕೇಳಿಲ್ಲ.
ಜೆಜೆಎಂ ನಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಕೆಲಸ ನೀಡಿ ಆ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದ ಅವರು ಕಾಂಗ್ರೇಸ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ವಿಜಯಪೂರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಕೃಷ್ನಾ ಮೇಲ್ದಂಡೆ ಯೋಜನೆಗೆ ಪ್ರತೀ ವರ್ಷ ೨೦ ಸಾವಿರ ಕೋಟಿ ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಒಂದು ರೂಪಾಯಿ ಸಹ ಹಣ ನೀಡಿಲ್ಲ ಎಂದರು.
ಜುಲೈ ೯ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿ ಪಟ್ಟಣಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಲೋಕಾರ್ಪಣೆ ಹಾಗೂ ಭೂಮಿ ಪೂಜೆ ಆಗಮಿಸಲು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದಿಂದ ಅನುದಾನ ನೀಡಿಲ್ಲ ನಮ್ಮ ಅನುದಾನದ ಪೂಜೆ ಮಾಡಲು ನೀವು ಬರುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯ ಎಂಟು ಕ್ಷೇತ್ರಗಳಿಗೆ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರತಿ ಕ್ಷೇತ್ರಕ್ಕೆ ಆರರಿಂದ ಹತ್ತು ಕೋಟಿ ರೂಪಾಯಿ ಅನುದಾನ ನೀಡಿದೆ. ಆ ಅನುದಾನ ಸಹ ತಮ್ಮದೇ ಎಂದು ಶಾಸಕರು ಪೂಜೆ ಮಾಡಿಕೊಳ್ಳುತ್ತಿದ್ದಾರೆ ಅವರ ಪಾಡಿಗೆ ಅವರು ಪೂಜೆ ಮಾಡಿಕೊಳ್ಳಲಿ ಅಭಿವೃದ್ಧಿ ನಿರಂತರವಾಗಿ ಸಾಗಲಿ ಬಿಜೆಪಿ ಮಾಡಿದ್ದ ಕಾರ್ಯಗಳಿಗೆ ಪೂಜೆ ಮಾಡಲು ಮುಖ್ಯಮಂತ್ರಿ ಬರುತ್ತಿದ್ದಾರೆ. ರೇವಣಸಿದ್ದೇಶ್ವರ ಏತ ನೀರಾವರಿಯ ಹಂತ ಒಂದು ಹಂತ ೨ ಎಂದು ಕಾಮಗಾರಿಗಳನ್ನು ಮಾಡಿ ಪೂಜೆ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಮುಖ್ಯಮಂತ್ರಿಗಳಿಗಿಲ್ಲ ಪ್ರಧಾನಿ ಮೋದಿ ಮಾಡುವಂತೆ ಕೆಲಸ ಮಾಡಿದ್ದರೆ ಈಗ ನಮ್ಮ ದೇಶ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರುತ್ತಿತ್ತು ಎಂದರು.
ಭಾಜಪ ಮುಖಂಡರಾದ ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ,ಕಾಸು ಗೌಡ ಬಿರಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೇ, ಶೀಲವಂತ ಉಮರಾಣಿ, ಮಳುಗೌಡ ಪಾಟೀಲ,ಭಾರತ ಕುಲಕರಣಿ, ದೇವೇಂದ್ರ ಕುಂಬಾರ ಮಾತನಾಡಿದರು.
ವೇದಿಕೆಯಲ್ಲಿ ಹಣಮಂತರಾಯಗೌಡ ಪಾಟೀಲ ಅನಿಲ ಗೌಡ ಬಿರಾದಾರ ವಿಜಯಲಕ್ಷ್ಮಿ ರೋಗಿಮಠ ರವಿ ಬಗ್ಗೆ ಹೊನ್ನಪ್ಪ ಪಾಟೀಲ, ಇದ್ದರು.
ಕಾರ್ಯಕ್ರಮದಲ್ಲಿ ಬಾಳು ಮುಳಜಿ, ಶಾಂತು ಕಂಬಾರ, ಸಂಜೀವ ದಶವಂತ, ಮಂಜುನಾಥ ದೇವರ, ಮಹೇಶ್ ಹೂಗಾರ, ಮಲ್ಲು ಗುಡ್ಡ, ರಾಜಪ್ಪ ಬಡಿಗೇರ, ಶಾಮಲಾ ಬಗಲಿ, ನಾಗೇಶ ಹೆಗಡೆಯಾಳ, ರಾಮಸಿಂಗ ಕನ್ನೊಳ್ಳಿ, ಶರಣಗೌಡ ಬಂಡಿ, ರವಿಕಾಂತ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.