
ನವಲಗುಂದ,ಅ.೧೮: ಧಾರವಾಡ ಜಿಲ್ಲೆಯಲ್ಲಿ ೨೦೨೫ರ ಮುಂಗಾರು ಅವಧಿಯಲ್ಲಿ ಸುರಿದ ಅತೀವೃಷ್ಟಿಯಿಂದ ಸಂಭವಿಸಿದ ಬೃಹತ್ ಪ್ರಮಾಣದ ಬೆಳೆ ಹಾನಿ ಪರಿಹಾರಕ್ಕೆ ರ‍್ಕಾರವು ಹೆಚ್ಚುವರಿಯಾಗಿ ರೂ. ೬೦.೦೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹೊಸ ಅನುದಾನದೊಂದಿಗೆ, ರೈತರ ಖಾತೆಗಳಿಗೆ ಒಟ್ಟು ರೂ. ೮೦.೦೦ ಕೋಟಿ ಪರಿಹಾರ ಜಮಾ ಆಗಲಿದೆ ಎಂದು ಸ್ಥಳೀಯ ಶಾಸಕ ಎನ್. ಹೆಚ್. ಕೋನರಡ್ಡಿ ಹೇಳಿದ್ದಾರೆ.
ಅವರು ನೀಡಿದ ಮಾಹಿತಿಯಂತೆ, ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಒಟ್ಟು ೯೭,೬೨೯.೬೪ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆ ಹಾನಿ ಸಂಭವಿಸಿದೆ. ಇದರಲ್ಲಿ ಕೃಷಿ ಬೆಳೆ ಹಾನಿ ವಿಸ್ತರ‍್ಣ ೯೩,೨೩೦.೮೬ ಹೆಕ್ಟೇರ್ ಆಗಿದ್ದರೆ, ತೋಟಗಾರಿಕೆ ಬೆಳೆಹಾನಿ ವಿಸ್ತರ‍್ಣ ೪,೩೯೮.೭೮ ಹೆಕ್ಟೇರ್‌ನಷ್ಟಿದೆ. ಈ ಬೃಹತ್ ಹಾನಿಗೆ ಸೂಕ್ತ ಪರಿಹಾರ ನೀಡಲು ರ‍್ಕಾರವು ತ್ವರಿತ ಕ್ರಮ ಕೈಗೊಂಡಿದೆ.
ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ. ೨೦.೦೦ ಕೋಟಿ ಹಣ ಜಮಾ ಇದ್ದು, ಹೊಸದಾಗಿ ಬಿಡುಗಡೆಗೊಂಡ ರೂ. ೬೦.೦೦ ಕೋಟಿ ಸೇರಿ ಒಟ್ಟು ರೂ. ೮೦.೦೦ ಕೋಟಿ ಅನುದಾನ ಲಭ್ಯವಾದಂತಾಗಿದೆ. ಈ ಮೊತ್ತವನ್ನು ಕೇಂದ್ರ ರ‍್ಕಾರದ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ (Sಆಖಈ/ಓಆಖಈ) ಮರ‍್ಗಸೂಚಿಗಳ ಅನುಸಾರ, ಜಿಲ್ಲಾಧಿಕಾರಿಗಳ ಮೂಲಕ ರ‍್ಹ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ (ನೇರ ನಗದು ರ‍್ಗಾವಣೆ) ಮೂಲಕ ಜಮಾ ಮಾಡಲು ರ‍್ಕಾರವು ಸೂಚನೆ ನೀಡಿದೆ ಎಂದು ಅವರು ಹೇಳಿದ್ದಾರೆ.