Home ಜಿಲ್ಲೆ ಕಲಬುರಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಬದ್ಧ: ಶಾಸಕರ ಪ್ರಶ್ನೆಗೆ ಸಚಿವ ಭೈರತಿ ಭರವಸೆ ಉತ್ತರ

ಶುದ್ಧ ಕುಡಿಯುವ ನೀರು ಪೂರೈಕೆಗೆ ಬದ್ಧ: ಶಾಸಕರ ಪ್ರಶ್ನೆಗೆ ಸಚಿವ ಭೈರತಿ ಭರವಸೆ ಉತ್ತರ

ಕಲಬುರಗಿ,ಮಾ.14-ಕಲಬುರಗಿಗೆ ನೀರು ಪೂರಸುವ ಸರಡಗಿ ಬಂದಾರಿಗೆ ನಗರ ಚರಂಡಿ ನೀರು, ಭತದ ಗದ್ದೆ ಕೆಮಿಕಲ್ ನೀರು ಸೇರುತ್ತಿದ್ದು ಇದರಿಂದ ನಗರದ ಜನ ಇಂದಿಗೂ ಚರಂಡಿ, ಕೊಳಚೆ ಮಿಶ್ರಿತ ಹಾಗೂ ಭತ್ತದ ಗದ್ದೆಯ ರಸಾಯನ ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ ಇದರಿಂದ ರೋಗಗಲು ಕಾಡುತ್ತ ಹೈರಾಣಾಗಿದ್ದಾರೆ. ಸರ್ಕಾರ ತಕ್ಷಣ ನಗರ ವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸುವಂತೆ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಶುಕ್ರವಾರ ಸದನ ಕಲಾಪದಲ್ಲಿ ಗಂಭೀರವಾಗಿ ನೀರಿನ ವಿಚಾರ ಪ್ರಸ್ತಾಪಿಸಿದರು.
ಭೀಮಾ ನೀರು ನಗರಕ್ಕೆ ಪೂರೈಸಲಾಗುತ್ತಿದೆ. ಈ ನದಿಯಲ್ಲಿ ಬೇಸಿಗೆಯಲ್ಲಿ ನೀರೇ ಇರೋದಿಲ್ಲ. ಮಹಾರಾಷ್ಟ್ರ ನೀರು ಹಿಡದಿಟ್ಟುಕೊಂಡಿದೆ. ಆಗ ನಾವು ನಾರಾಯಣಪುರ ಜಲಾಸಯದ ನೀರು ಶಾಖಾ ಕಲುವೆಗಳಿಂದ ಹರಿಸುತ್ತೇವೆ. ಆ ನೀರು ಸರಡಗಿ ಬಾಂದಾರಿಗೆ ಬಂದು ನಿಲಲುತ್ತದೆ. ಅದೆಲ್ಲವೂ ಕೆಮಿಕಲ್ ಭತ್ತದ ಗದ್ದೆ ಸಿಂಪರಿಸಿದ ಔಷಧಿಯುಕ್ತ ನೀರಾಗಿರುತ್ತದೆ.
ಇನ್ನು ಕಲಬರಗಿ ನಗರದ ಚರಡಿ ನೀರೆಲ್ಲವೂ ಭೀಮಾ ನದಿಗೇ ಸೇರುತ್ತಿದ್ದು ಈ ನೀರೂ ಸರಡಗಿ ಬಾಂದಾರಿಂದ ಎತ್ತಿ ನೀರು ಪೂರೈಸಲಾಗುತ್ತಿದೆ. ಹೀಗಾಗಿ 55 ವಾರ್ಡ್ ಗಳಲ್ಲಿ ಹೊಲಸು, ಕೆಟ್ಟ ವಾಸನೆಯ ನೀರು ಪೂರೈಕೆಯಾಗುತ್ತಿದೆ. ಇದಕ್ಕೆ ಪರಿಹಾರ ತಕ್ಷಣ ನೀಡುವ ಜರೂರತ್ತಿದೆ ಎಂದು ಸರ್ಕಾರದ ಗಮನ ಸೆಳೆದರು.
ಕಲಬುರಗಿ ನಗರಕ್ಕೆ ನೀರು ಪೂರೈಸಲು ನಿರ್ಮಿಸಲಾಗಿದ್ದ ಸರಡಗಿ ಬ್ಯರೇಜ್ ಹೂಲು ತುಂಬಿದೆ. ಅದರ ಎತ್ತರವನ್ನೂ ಹೆಚ್ಚಿಸಬೇಕಿದೆ. ನಗರದ ಹೊಲಸು ನೀರು ಇಲ್ಲಿಗೆ ಬಂದು ಸೇರುತ್ತಿದೆ. ಈ ಹೊಲಸು ನೀರಿನ ನಾಲಾ ನದಿಗೆ ಸೇರದಂತೆ ಕ್ರಮ ವಹಿಸಬೇಕಿದೆ. ನಿತ್ಯ ನೀರಿಗಾಗಿ ಜನ ಹಾಹಾಕಾರ ಮಾಡುತ್ತಿದ್ದಾರೆ. ಶುದ್ಧ ನೀರು ಒದಗಿಸಲು ಸರ್ಕಾರ ತಕ್ಷಣ ಆಸಕ್ತಿ ತೋರಿಸಿ ಮುಂದಾಗುವಂತೆ ಆಗ್ರಹಿಸಿದರು.

ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಸಮಸ್ಯೆ ನೀಗಿಸಲು ಅಗತ್ಯವಿರುವ ಕಡೆಗಳಲ್ಲಿ ಬೋರ್ ವೆಲ್ ಮತ್ತು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಂದಿಕೂರು ಗ್ರಾಮದ ಬಳಿ ರೊಚ್ಚು ನೀರಿನ ಸಂಸ್ಕರಣ ಘಟಕದ ಕೆಲವು ಕಡೆ ದುರಸ್ತಿ ಕಾರ್ಯ ನಡೆಯುತ್ತಿರುವುದು, ಭೀಮಾ ನದಿಯ ಮೂಲಸ್ಥಾವರದ ಮೇಲ್ಭಾಗದಲ್ಲಿ ಗ್ರಾಮಗಳಿಂದ ನೈಸರ್ಗಿಕ ನಾಲಾದಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರಿನಿಂದಾಗಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಇದನ್ನು ತಪ್ಪಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಕಲುಷಿತ ನೀರಿಗೆ ಕಾರಣವಾಗಿದ್ದ ಎಸ್ ಟಿಪಿ ಘಟಕವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ, ನೈಸರ್ಗಿಕ ನಾಲದಲ್ಲಿ ಹರಿದು ಬರುತ್ತಿರುವ ತ್ಯಾಜ್ಯ ನೀರನ್ನು ಬ್ಯಾರೇಜಿನ ತಳ ಭಾಗಕ್ಕೆ ಹರಿದುಹೋಗುವಂತೆ ಮಾಡುವುದಕ್ಕಾಗಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ನಿರಂತರ ನೀರು ಬದ್ಧ

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ನಿರಂತರ ಕುಡಿಯುವ ನೀರು ಪೂರೈಸಲು ವಿಶ್ವಬ್ಯಾಂಕ್ ನೆರವಿನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಭೌಗೋಳಿಕವಾಗಿ 47 ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರಸ್ತುತ ಹಣಕಾಸಿನ ಲಭ್ಯತೆ ಅನುಸಾರವಾಗಿ 32 ವಲಯಗಳಿಗೆ ವಿಶ್ವಬ್ಯಾಂಕ್ ನೆರವಿನ ಯೋಜನೆಯಡಿ ಹಾಲಿ ಇರುವ ಎಲ್ಲಾ ವಿತರಣಾ ಜಾಲವನ್ನು ವಿನ್ಯಾಸಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
ನಗರದ ಮನೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 800 ಕೋಟಿ ರೂಪಾಯಿಗಳ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ನಾನಾ ಕಾರಣಗಳಿಂದ ಕಾಮಗಾರಿಯನ್ನು ವಿಳಂಬ ಮಾಡಿದ ಗುತ್ತಿಗೆದಾರ ಸಂಸ್ಥೆಯಾದ ಎಲ್ & ಟಿ ಗೆ 60 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದರು.
ಈಗಾಗಲೇ 8 ಸಾವಿರ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಇನ್ನುಳಿದ ಮನೆಗಳಿಗೆ ನೀರು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
1800 ಕೋಟಿ ಯೋಜನೆ
ಕಲಬುರಗಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಬ್ಯಾರೇಜ್ ನಿಂದ ನೀರು ತರುವ 1800 ಕೋಟಿ ರೂಪಾಯಿಗಳ ಯೋಜನೆಯನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಸಚಿವರು ಸದನದ ಗಮನಕ್ಕೆ ತಂದರು.