
ಎಲ್‌ಪಿಜಿ ೧೯೫.೫೦ ರೂ ಹೆಚ್ಚಳ
ನವದೆಹಲಿ,ಏ.೧-ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆ ನಡುವೆಯೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ೧೯೫ ರೂ. ೫೦ ಪೈಸೆ ಹೆಚ್ಚಳವಾಗಿದ್ದು, ವಿಮಾನಕ್ಕೆ ಬಳಸುವ ಇಂಧನ(ಎಟಿಎಫ್) ಬೆಲೆಯನ್ನು ಏರಿಕೆ ಮಾಡಲಾಗಿದೆ.
ಇದರಿಂದ ವಿಮಾನ ಪ್ರಯಾಣ ದರವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ವಾಣಿಜ್ಯ ಸಿಲಿಂಡರ್ ಬಳಕೆಯಿಂದ ಈಗಾಗಲೇ ಸಿಲಿಂಡರ್ ಕೊರೆತಯಿಂದ ಸಂಕಷ್ಟಕ್ಕೆ ಸಿಲುಕಿರುವ ಆತಿಥ್ಯ ಉದ್ಯಮಕ್ಕೆ ಮತ್ತಷ್ಟು ಹೊಡೆತ ಬಿದ್ದಿದ್ದು ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ.
ದೇಶಾದ್ಯಂತ ವಾಣಿಜ್ಯ ಸಿಲಿಂಡರ್‌ಗಳಿಗೆ ಅಭಾವ ತಲೆದೋರಿರುವಾಗಲೇ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬೆಲೆಯ ಸಿಲಿಂಡರ್ ಬೆಲೆಯನ್ನು ೧೯೫.೫೦ ಹೆಚ್ಚಳ ಮಾಡಿದ್ದು, ವಾಣಿಜ್ಯ ಸಿಲಿಂಡರ್ ೧೯ಕೆಜಿ ತೂಕದ ವಾಣಿಜ್ಯ ಬಳಕೆಯ ದೆಹಲಿಯಲ್ಲಿ ೨೦೭೮. ೫೦ ಪೈಸೆಗೆ ತಲುಪಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿಲ್ಲ.
ಸರ್ಕಾರಿ ಸೌಮ್ಯದ ತೈಲ ಮಾರಾಟ ಕಂಪನಿಗಳಾದ ಭಾರತ್ ಪೆಟ್ರೋಲಿಯಿಂ, ಹಿಂದೂಸ್ತಾನ್ ಪೆಟ್ರೋಲಿಯಂ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ವಿದೇಶಿ ವಿನಿಮಯ ದರಕ್ಕಗನುಗುಣವಾಗಿ ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಮತ್ತು ಪ್ರೀಮಿಯರ್ ಪೆಟ್ರೋಲಿಯಂ ದರಗಳನ್ನು ಪರಿಷ್ಕರಿಸುತ್ತದೆ. ಅದರಂತೆ ಇಂದು ವಿಮಾನ ಬಳಕೆಯ ಪ್ರೀಮಿಯಂ ಪೆಟ್ರೋಲ್ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ.
ಕಳೆದ ಮಾರ್ಚ್ ೧ ರಂದು ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ೬೦ ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ೧೧೪.೫೦ ಪೈಸೆ ಹೆಚ್ಚಿಸಲಾಗಿತ್ತು. ಈಗ ಮತ್ತೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ.
ವಿಮಾನಗಳಿಗೆ ಬಳಸುವ ಇಂಧನ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಪ್ರತಿ ಕಿಲೋ ಲೀಟರ್ (೧ ಸಾವಿರ ಲೀಟರ್) ವಿಮಾನ ಇಂಧನ ಬೆಲೆ ದಾಖಲೆಯ ೨ ಲಕ್ಷ ರೂ. ದಾಟಿದೆ. ವಿಮಾನ ಬಳಕೆಯ ಪೆಟ್ರೋಲ್ ದರ ಏರಿಕೆಯಿಂದ ವಿಮಾನ ಪ್ರಯಾಣ ದರಗಳು ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆಗಳಿವೆ. ವಿಮಾನ ಕಾರ್ಯಾಚರಣೆಯ ಒಟ್ಟು ವೆಚ್ಚದ ಶೇ. ೪೦ ರಷ್ಟು ಇಂಧನಕ್ಕೆ ವೆಚ್ಚವಾಗುತ್ತದೆ.
ಮಧ್ಯಪ್ರಾಚ್ಯದ ಕೆಲವು ದೇಶಗಳ ವಾಯು ಪ್ರದೇಶ ಮುಚ್ಚಿರುವುದರಿಂದ ಪಶ್ಚಿಮ ಏಷ್ಯಾದ ಹಲವು ನಗರಗಲ್ಲಿ ವಿಮಾನ ಹಾರಾಟ ನಡೆಸಲು ಬೇರೆ ಮಾರ್ಗಗಳನ್ನು ಬಳಸುತ್ತಿರುವುದರಿಂದ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚನ ಇಂಧನ ಖರ್ಚಾಗುತ್ತಿದೆ. ಈಗ ಈ ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ವಿಮಾನಯಾನ ಕಂಪನಿಗಳಿಗೆ ಮತ್ತಷ್ಟು ಹೊರೆಯಾಗಲಿದೆ.
ಪ್ರಿಮಿಯಮ್ ಪೆಟ್ರೋಲ್ ದರ ಏರಿಕೆ
ಇಂಡಿಯನ್ನ ಆಯಿಲ್ ಕಾರ್ಪೋರೇಷನ್ ತನ್ನ ಪ್ರಿಮಿಯಮ್ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ ೧೧ ರೂಗಳನ್ನು ಏರಿಕೆ ಮಾಡಿದೆ. ಸಾಮಾನ್ಯ ಪೆಟ್ರೋಲ್,ಡಿಸೆಲ್ ದರಗಳು ಏರಿಕೆಯಾಗಿಲ್ಲ































