ಕಳಪೆ ಕಾಮಗಾರಿ ಕುಸಿದು ಬಿದ್ದ ಸೇತುವೆ: ಚಾಮನೂರ ಗ್ರಾಮಸ್ಥರ ಪ್ರತಿಭಟನೆ

ಕಲಬುರಗಿ,ಅ.16- ಕಳಪೆ ಕಾಮಗಾರಿ ಸೇತುವೆ ಕುಸಿತ ಕೆಎಂವಿ ಕಂಪನಿ ಕಪ್ಪು ಪಟ್ಟಿಗೆ ಸೆರಿಸಿಲು ಕಂಪನಿ ಪರ ನಿಂತಿರುವ ಭ್ರಷ್ಟ ಅದಿಕಾರಿಗಳ ವಜಾಗೋಳಿಸಿ ಸೆತುವೆ ಕೆಲಸ ಪ್ರಾರಂಬಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಮತ್ತು ಪಾಳಾದ ಗುರುಮೂರ್ತಿ ಶಿವಾಚಾರ್ಯರರ ನೆತೃತ್ವದಲ್ಲಿ ಚಾಮನೂರ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಕೈಗೊಂಡ ಚಾಮನೂರ ಗ್ರಾಮಸ್ಥರು, ಕಳಪೆಕಾಮಗಾರಿಯ ಹಿನ್ನಲೆಯಲ್ಲಿ ಚಾಮನೂರ ನಿರ್ಮಾಣ ಹಂತದಲ್ಲಿದ್ದ ಸೇತುವೆ ಸಂಪೂರ್ಣ ಕುಸಿದಿದ್ದು, ಕಳಪೆಕಾಮಗಾರಿ ಗೈಗೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು.
ಜೇವರ್ಗಿ ತಾಲುಕಾ ನರಿಬೋಳ , ಚಿತಾಪೂರ ತಾಲುಕಾ ಚಾಮನೂರ ಸೆತುವೆ ಅದಿಕಾರಿಗಳ ನಿರ್ಲಕ್ಷದಿಂದಾಗಿ ಗುತ್ತಿಗೆದಾರ ಗುಣಮಟ್ಟದ ಕಾಮಗಾರಿನಿರ್ವಹಿಸದೆ ಇರುವ ಕಾರಣಕ್ಕೆ ಒಂದೇ ಮಳೆಗೆ ಸೇತುವೆ ಸಂಪೂರ್ಣ ಕಳಚಿ ಬಿದ್ದಿದೆ. ಜನಪ್ರತಿನಿದಿಗಳ ನಿರ್ಲಕ್ಷದಿಂದಾಗಿ ನರಿಬೋಳ ಚಾಮನೂರ ಸಂಪರ್ಕ ಸೆತುವೆ ನಿರುಪಾಲಾಗಿದ್ದು, ಸುತ್ತಮೂತ್ತಲಿನ ಹಲವಾರು ಗ್ರಾಮಗಳ ಜನರಿಗೆ ತೊಂದರೆ ಯಾಗುತ್ತಿದೆ.
ಕಳೆದ 2018ರಲ್ಲಿ 68 ಕೋಟಿ ರೂಪಾಯಿ ವೆಚ್ಚದಲ್ಲಿ ಭೀಮಾ ನದಿಗೆ ಸೆತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಮೂರು ವರ್ಷದಲ್ಲಿ ಸೆತುವೆ ಪೂರ್ಣಗಳಿಸುವ ಭರವಸೆ ನೀಡಿದ್ದ ಹೈದ್ರಾಬಾದ ಮೂಲದ ಕಂಪನಿ ಗುತ್ತಿಗೆಯನ್ನು ಪಡೆದು ಒಂದುವರೆ ವರ್ಷದಲ್ಲಿಯೆ ಶೇಕಡಾ 70 ರಷ್ಟು ಕಾಮಗಾರಿ ಮುಗಿಸಿತತು. ಕಾಮಗಾರಿ ಅರ್ಧಕ್ಕೆನಿಲ್ಲಿಸಿ 7 ವರ್ಷವಾದರ ಇನ್ನೂ ಪೂರ್ಣಗೊಂಡಿಲ್ಲ.
ಜೇವರ್ಗಿ ಶಾಸಕರು ಮತ್ತು ಕೆ ಕೆ ಆರ್ಡಿಬಿ ಅದ್ಯಕ್ಷ ಡಾ.ಅಜಯಸಿಂಗ್ ಬೆಂಗಳೂರಿಗೆ ಹೋರಾಟಗಾರರ ನಿಯೋಗ ಭೇಟಿಮಾಡಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಅವರನ್ನು ಭೇಟಿ ಮಾಡಿಸಿ ಮಾಡಿಸಿ 14 ಕೋಟಿ ರೂ. ಅನುದಾನಕ್ಕೆ ಮನವಿ ಸಲ್ಲಿಸಿದಾಗ ಸಚಿವರು ಸ್ಪಂದಿಸಿ ಅನುದಾನ ಬಿಡಗಡೆಮಾಡುವ ಭರವಸೆ ನೀಡಿದ್ದರು.
ಕಳಪೆ ಗಾಮಗಾರಿಯ ಕÀುರಿತು ಸಮಗ್ರ ತನಿಖೆನಡೆಸಿ ಗುತಿಗೆದಾರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿಉ ಶಂಕರಗೌಡ ಪಾಟೀಲ, ಸುಮಾ ಕವಲ್ದಾರ, ಅಶ್ವಿನಿ ಚವ್ಹಾಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.