4.22 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಅ.25-ಮನೆ ಬೀಗ ಮುರಿದು 4.22 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಹಾಗರಗಾ ರಸ್ತೆಯ ಫಿರದೋಶ ಕಾಲೋನಿಯಲ್ಲಿ ನಡೆದಿದೆ.
ಖಾಜಾ ಮೈನೊದ್ದಿನ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನೆಕ್ಲೆಸ್, 30 ಸಾವಿರ ರೂ.ಮೌಲ್ಯದ 5 ಗ್ರಾಂ.ಒಂದು ಜೊತೆ ಬಂಗಾರದ ಕಿವಿಯಲ್ಲಿನ ರಿಂಗ್, 12 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಉಂಗುರ, 10 ಸಾವಿರ ರೂ.ಮೌಲ್ಯದ 20 ತೊಲೆ ಬೆಳ್ಳಿ ಕಾಲು ಚೈನಾ, 3.10 ಲಕ್ಷ ರೂ.ನಗದು ಸೇರಿ 4.22 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಖಾಜಾ ಮೈನೊದ್ದಿನ್ ಅವರು ಮನೆಗೆ ಬೀಗ ಹಾಕಿಕೊಂಡು ಪತ್ನಿ, ಮಗನ ಜೊತೆಗೆ ಹೈದ್ರಾಬಾದ್‍ಗೆ ಹೋದ ಸಂದರ್ಭದಲ್ಲಿ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.