
ಕಲಬುರಗಿ,ಸೆ.22-ಕಿರಾಣಿ ಅಂಗಡಿ ಬೀಗ ಮುರಿದು 2.22 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಭವಾನಿ ನಗರದಲ್ಲಿ ನಡೆದಿದೆ.
ಚಂದ್ರಕಾಂತ ಗೋಳಾ ಎಂಬುವವರ ಕಿರಾಣಿ ಅಂಗಡಿ ಬೀಗ ಮುರಿದು ಕಳ್ಳರು 70 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೆಟ್, 70 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಸುತ್ತುಂಗುರ, 70 ಸಾವಿರ ರೂ.ಮೌಲ್ಯದ ತಲಾ 5 ಗ್ರಾಂ.ಬಂಗಾರದ ಎರಡು ಸುತ್ತುಂಗುರ ಮತ್ತು 12 ಸಾವಿರ ರೂ.ನಗದು ಸೇರಿ 2.22 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.