Home ಜಿಲ್ಲೆ ಕಲಬುರಗಿ ಅಳಂದ ಕ್ಷೇತ್ರದಲ್ಲಿ ಸಿಎಂ ಅನುದಾನ ದುರುಪಯೋಗ

ಅಳಂದ ಕ್ಷೇತ್ರದಲ್ಲಿ ಸಿಎಂ ಅನುದಾನ ದುರುಪಯೋಗ

ಕಲಬುರಗಿ,ಮಾ.13: ಅಳಂದ ಮತಕ್ಷೇತ್ರದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಹಳ್ಳಿಗಳ ರಸ್ತೆ ಕಾಮಗಾರಿ ನಿರ್ಮಾಣ ಮಾಡುತ್ತಿರುವದಾಗಿ ಸುಳ್ಳು ಹೇಳುತ್ತಿರುವ ಅಳಂದ ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ನೀಡಿದ ಅನುದಾನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅಳಂದ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿಂದು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಜನರ ತೆರಿಗೆ ಹಣ ಹಣ ಬಳಸಿಕೊಂಡು, ತಮ್ಮದೇ ಒಡೆತನದ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಸಾರ್ವಜನಿಕರಿಗೆ ರೈತರಿಗೆ ಅನುಕೂಲ ಮಾಡಿಕೊಳ್ಳುತ್ತಿರುವದಾಗಿ ಹೇಳುತ್ತಿರುವ ಶಾಸಕ ಬಿ.ಆರ್ ಪಾಟೀಲ ಮತ್ತು ಗುಮುಲ್ ಅಧ್ಯಕ್ಷ ಆರ್ ಕೆ ಪಾಟೀಲ ಅವರು ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಅಳಂದ ಕ್ಷೇತ್ರದ ಅಭಿವೃದ್ಧಿಗಾಗಿ ನೀಡಿದ 50 ಕೋಟಿ ರೂ ಅನುದಾನದಲ್ಲಿ ಈವರೆಗೆ 8.66 ಕೋಟಿ ರೂ ದುರುಪಯೋಗವಾಗಿದೆ.ಕರ್ನಾಟಕ ಗ್ರಾಮೀಣ ಮುಲಭೂತ ಸೌಲಭ್ಯಗಳ ಅಭಿವೃದ್ಧಿ ನಿಗಮದಿಂದ ಕೇವಲ ಮುರುಮ್ ಕಾಮಗಾರಿ ಮಾಡಿ ಕೋಟ್ಯಾಂತರ ಲೆಕ್ಕ ತೋರಿಸಿರುವದು ಯಾವ ನ್ಯಾಯ ? ಎಂದರು. ಸುಮಾರು 12 ರಸ್ತೆ ಕಾಮಗಾರಿಗಳಲ್ಲಿ ಒಂದೊಂದು ರಸ್ತೆಗೆ 5 ರಿಂದ 6 ಲಕ್ಷ ರೂ ಮಾತ್ರ ಬಳಸಿ, ಕೇವಲ ಮುರುಮ್ ಹಾಕಿ ರಸ್ತೆ ನಿರ್ಮಾಣ ಮತ್ತು ಸುಧಾರಣೆ ಕಾಮಗಾರಿ ಮಾಡಿದ್ದಾರೆ ಎಂದು ದೂರಿದರು.ಜವಾಬ್ದಾರಿಯುತ ಉನ್ನತ ಸ್ಥಾನದಲ್ಲಿದ್ದುಕೊಂಡು ತಪ್ಪು ಮಾಹಿತಿ ನೀಡಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಶಾಸಕರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಭೂಸನೂರ,ಗೌರಿ ಚಿಚಕೋಟಿ, ರಮೇಶ ಬಿರಾದಾರ,ಸಂತೋಷ ಹಾದಿಮನಿ,ಅಶೋಕ ಹತ್ತರಕಿ,ಪ್ರಕಾಶ ಕಡಗಂಚಿ,ಅಪ್ಪಾರಾವ ಮೈನಾಳೆ ಉಪಸ್ಥಿತರಿದ್ದರು.