‘ಮಕ್ಕಳ ಸುಪ್ತ ಕಲಾಭಿವ್ಯಕ್ತಿ ವೇದಿಕೆ ಪ್ರತಿಭಾಕಾರಂಜಿ’


ತಿಮ್ಮಾಪೂರ,ನ.೨೦: ಶಾಲಾ ಮಕ್ಕಳಲ್ಲಿ ಹುದುಗಿರುವ ವಿಭಿನ್ನ ಪ್ರಕಾರದ ಸುಪ್ತ ಕಲಾಭಿವ್ಯಕ್ತಿ ವೇದಿಕೆಯಾಗಿ ಶಾಲಾ ಶಿಕ್ಷಣ ಇಲಾಖೆಯ ಕಾರ್ಯಕ್ರಮವಾದ ಪ್ರತಿಭಾಕಾರಂಜಿ ಗಮನಸೆಳೆದಿದೆ ಎಂದು ಗ್ರಾಮೀಣ ತಾಲೂಕು ಬಿಇಓ ರಾಮಕೃಷ್ಣ ಸದಲಗಿ ಹೇಳಿದರು.


ಅವರು ತಾಲೂಕಿನ ತಿಮ್ಮಾಪೂರ ಜ್ಞಾನಜ್ಯೋತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮ್ಮಿನಭಾವಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಭಾ ಕಾರಂಜಿಯAತಹ ಕಾರ್ಯಕ್ರಮಗಳು ಶಾಲಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಆತ್ಮವಿಶ್ವಾಸ ಹೆಚ್ಚಿಸಿ ಅವರ ಸರ್ವತೋಮುಖ ವಿಕಾಸಕ್ಕೆ ಚಾಲನೆ ಒದಗಿಸುತ್ತವೆ ಎಂದರು.


ಬಿಆರ್‌ಸಿ ಸಮನ್ವಯ ಅಧಿಕಾರಿ ಕುಮಾರ್ ಕೆ. ಎಫ್., ಶಿಕ್ಷಣ ಸಂಯೋಜಕ ಎ.ಎಚ್.ನದಾಫ, ಬಿಆರ್‌ಪಿ ಎನ್.ಬಿ.ರಾಜೂರ, ಮರೇವಾಡ ಗ್ರಾ.ಪಂ.ಸದಸ್ಯ ಮಹಾಂತಯ್ಯ ಹಿರೇಮಠ, ಪಿಡಿಓ ಮಲ್ಲಿಕಾರ್ಜುನ ಕೊಯ್ಯಪ್ಪನವರ, ಅಮ್ಮಿನಭಾವಿ ಯುಕೋ ಬ್ಯಾಂಕ್ ವ್ಯವಸ್ಥಾಪಕ ಶಂಕರ ಕಡ್ಲಿಮಠ, ಸಿಆರ್‌ಪಿ ಬಸವರಾಜ ಕುರಗುಂದ, ಎ.ಆರ್.ದೇಸಾಯಿ, ಎಸ್.ಎ.ಜಾಧವ ಪಾಲ್ಗೊಂಡಿದ್ದರು.
ತಿಮ್ಮಾಪುರ ಜ್ಞಾನಜ್ಯೋತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಬಿಂದು ಲಗಳಿ ಸ್ವಾಗತಿಸಿದರು. ಕ್ಲಸ್ಟರನ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.