
ಅಥಣಿ :ನ.20: ಪ್ರಾಥಮಿಕ ಹಂತದಲ್ಲೆ ವಿದ್ಯಾರ್ಥಿಗಳ ವ್ಯವಹಾರ ಜ್ಞಾನವನ್ನು ಗುರುತಿಸಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗಿದೆ. ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದು ಉರ್ದು ಕ್ಲಸ್ಟರ್ ಸಿ.ಆರ್.ಪಿ ಜಾಫರಶರೀಫ್ ಚಬನೂರ ಹೇಳಿದರು
ಅವರು ಪಟ್ಟಣದ ಆಝಾದ ಶಿಕ್ಷಣ ಸಂಸ್ಥೆಯ ಅಬುಲ್ ಕಲಾಂ ಉರ್ದು ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಪ್ರತಿವರ್ಷದಂತೆ ಈ ವರ್ಷವು ಮಕ್ಕಳಿಗೆ ವ್ಯವಹಾರ ಅಧ್ಯಯನವನ್ನು ಮತ್ತು ಗಣಿತದ ಮೂಲ ಕ್ರೀಯೆಗಳನ್ನು ಪ್ರಾಯೋಗಿಕವಾಗಿ ತಿಳಿಸುವ ಸಲುವಾಗಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸು, ವಿವಿಧ ಬಗೆಯ ತರಕಾರಿಗಳು. ಹಣ್ಣು ಹಂಪಲು. ಪಾನಿಪುರಿ. ಸಲಾಡ್. ಚಹಾ ಬಿಸ್ಕತ್ತ ಸೇರಿದಂತೆ ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪಾಲಕರು ಮಕ್ಕಳು ತಯಾರಿಸಿದ ಪದಾರ್ಥಗಳ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತರಕಾರಿ, ತಂಪು ಪಾನೀಯ, ಪಾನಿಪುರಿ, ಬೇಲ್ ಪುರಿ, ಸೊಪ್ಪು ಮತ್ತಿತರೆ ಪದಾರ್ಥಗಳನ್ನು ಪಾಲಕರು ಮಕ್ಕಳಿಂದ ಖರೀದಿಸಿ ಪಾಲಕರು ಮಕ್ಕಳ ವ್ಯವಹಾರ ಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಅಂಜುಮನ್ ಕಮಿಟಿ ಅಧ್ಯಕ್ಷ ಸಯ್ಯದ ಅಮೀನ ಗದ್ಯಾಳ, ಮೌಲಾನಾ ಸುಲೇಮಾನ್. ಮೌಲಾನಾ ಇಮ್ತಿಯಾಜ್. ದಸ್ತಗೀರ ಜಮಾದಾರ. ಇಮ್ರಾನ್ ಪಟಾಯಿತ್. ಫಯಾಜ್ ಮಾಸ್ಟರ್. ಸಂಸ್ಥೆಯ ನಿರ್ದೇಶಕರಾದ ಅನೀಸ್ ಝಾರೆ, ರಿಯಾಜಹ್ಮದ ಸನದಿ, ಈಶ್ರತಹುಸೇನ ಗದ್ಯಾಳ, ಡಾ. ಕಯ್ಯುಮ ಪಟಾಯತ್, ಪ್ರೌಡ ವಿಭಾಗದ ಮುಖ್ಯಗುರುಗಳಾದ ನಾಸೀರ ಹುಸೇನ ಶೇಖ್, ಪ್ರಾಥಮಕ ವಿಭಾಗದ ಪ್ರಧಾನ ಗುರುಗಳಾದ ಉಮರ ಮುಲ್ಲಾ, ಸಮೀವುಲ್ಲಾ ಸಲಗರ ಸೇರಿದಂತೆ ಶಿಕ್ಷಕರು. ಸಿಬ್ಬಂದಿ ವರ್ಗದವರು ಹಾಗೂ ಪಾಲಕ ಪೆÇೀಷಕರು ಉಪಸ್ಥಿತರಿದ್ದರು.































