ಕಲಬುರಗಿ;ಜೂ.27: ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ವತಿಯಿಂದ ನಡೆಸುತ್ತಿರುವ ಮದರ್ಸಾ-ಎ-ಮಕ್ತಬ್ ಉಲ್ ಫಿರ್ದೌಸ್ ತರಬೇತಿ ಕೇಂದ್ರದಲ್ಲಿ ಕುರಾನ್ ತರಬೇತಿಗೆ ಆಯ್ಕೆಯಾದ ಮಕ್ಕಳಿಗೆ ನೊಬೆಲ್ ಶಾಲೆಯ ಸಿಇಓ ಮೊಹಮ್ಮದ್ ಮೊರಾಜೊದ್ದೀನ್ ಕಾಶೀಫ್ ಜನ್ಮದಿನದ ನಿಮಿತ್ತ ಸನ್ಮಾನಿಸಿ ಗೌರವಿಸಲಾಯಿತು.
ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ಅಧ್ಯಕ್ಷ ಕಾಂಗ್ರೆಸ್ ನಾಯಕ ದಸ್ತೆಗೀರ್ ಅಹ್ಮದ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೊಹಮ್ಮದ್ ಮೆರಾಜುದ್ದೀನ್ ಕಾಶಿಫ್ ಮತ್ತು ಅವರ ಪತ್ನಿ ಡಾ. ಹಫ್ಸಾ ಮೆರಾಜುದ್ದೀನ್ ಭಾಗವಹಿಸಿದರು.
ಸಯ್ಯದಾ ಹುಮೈರಾ ಅಂಜುಮ್, ಅಲ್ಲಾಮಾ ಮೌಲಾನಾ ಗುಲಾಂ ದಸ್ತಗೀರ್ ನೂರಿ, ಡಾ ಅಬ್ದುಲ್ ರಹಮಾನ್, ತಜಮ್ಮುಲ್ ಹುಸೇನ್, ಜಮೀಲ್ ಅಹ್ಮದ್, ಶೌಕತ್ ಅಲಿ ಖಾನ್, ಜನಾಬ್ ಇಮ್ರಾನ್ ಕಾಲ್ದಿ, ಬಾಬಾ ಪೇಂಟರ್, ಹಾಜಿ ಶೇಖ್ ಚಾಂದ್, ಮೆಹಬೂಬ್ ಖುರೇಷಿ, ಮೊಹಮ್ಮದ್ ಅಕ್ರಮ್, ಹಸನ್ ಅಲಿ ಸುಲ್ತಾನ್ಪುರಿ, ಅಬ್ದುಲ್ ರಶೀದ್, ಮೊಹಮ್ಮದ್ ಇಮ್ರಾನ್, ಅಬ್ದುಲ್ ಸಮದ್, ಇರ್ಫಾನ್ ಅಹಮದ್ ಸೇರಿದಂತೆ ಹಲವರು ಇದ್ದರು.