ಕಲಬುರಗಿ,ಜೂ.27-ಬಾಲ್ಯ ವಿವಾಹ ಮಾಡಿದ ಹಿನ್ನೆಲೆಯಲ್ಲಿ ಬಾಲಕಿಯ ತಂದೆ-ತಾಯಿ ಮತ್ತು ವರ ಮತ್ತು ವರನ ತಂದೆ-ತಾಯಿ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರನ ತಂದೆ ರಾಮು, ತಾಯಿ ಲಲಿತಾ, ಬಾಲಕಿ ತಂದೆ ಆನಂದ ರಾಠೋಡ್ ಮತ್ತು ತಾಯಿ ವಿಜಯಲಕ್ಷ್ಮೀ ವಿರುದ್ಧ ಶಿಶು ಅಭಿವೃದ್ಧಿ ವಲಯ ಮೇಲ್ವಿಚಾರಕಿ ಗೀತಾ ರಾಠೋಡ್ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.