ಚಿಕನ್ ಲಿವರ್ ಪ್ರೈ

ಬೇಕಾಗುವ ಸಾಮಾಗ್ರಿಗಳು

ಚಿಕನ್ ಲಿವರ್ – ೧/೪ ಕೆಜಿ

ಈರುಳ್ಳಿ – ೧ ದಪ್ಪದು

ಎಣ್ಣೆ – ಕೊತ್ತಂಬರಿ

ಬ್ಲಾಕ್ ಪೆಪ್ಪರ್ ಪುಡಿ – ಒಂದೂವರೆ ಚಮಚ

ಅರಿಶಿಣ ಪುಡಿ – ಚಿಟಿಕೆ

ಖಾರದ ಪುಡಿ ೧ ಚಮಚ

ನಿಂಬೆ ರಸ ೧ ಹಣ್ಣಿನ ರಸ

???? ಬೆಳ್ಳುಳ್ಳಿ ಪೇಸ್ಟ್

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

  • ನಾನ್ ಸ್ಟಿಕ್ ಪ್ಯಾನ್‌ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಪ್ರೈ ಮಾಡಿ.
  • ಅದಕ್ಕೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
  • ತೊಳೆದ ಚಿಕನ್ ಲಿವರ್ ಸೇರಿಸಿ, ಬಣ್ಣ ಬದಲಾಗುವರೆಗೆ ಪ್ರೈ ಮಾಡಿ.
  • ಲಿ ಅದರ ಮೇಲೆ ಬಣ್ಣ ಚೇಂಜ್ ಆದ ಮೇಲೆ ಅರಿಶಿಣ ಪುಡಿ, ಉಪ್ಪು, ಖಾರದ ಪುಡಿ, ಬ್ಲಾಕ್

ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.

  • ೩-೪ ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
  • ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು,ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿದರೆ ರುಚಿರುಚಿಯಾದ ಚಿಕನ್ ಲಿವರ್ ಪ್ರೈ ಸವಿಯಲು ಸಿದ್ಧ