Home ಜಿಲ್ಲೆ ಚೈತ್ರ ನಿನಾದ’ ರಸದೌತಣ

ಚೈತ್ರ ನಿನಾದ’ ರಸದೌತಣ

ಬಾದಾಮಿ,ಮಾ23: ಇಲ್ಲಿನ ಸಿರಿಗಂಧ ಸಂಸ್ಕøತಿ ಬಳಗವು ಯುಗಾದಿ ಪ್ರಯುಕ್ತ ಶಿವಯೋಗ ಮಂದಿರ ಶಾಖಾಮಠದ ಆವರಣದಲ್ಲಿ ಏರ್ಪಡಿಸಿದ್ದ ಚೈತ್ರನಿನಾದ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

ಬಾಗಲಕೋಟೆಯ ಯುವ ಗಾಯಕ ಜಯತೀರ್ಥ ತಾಸಗಾಂವ ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದರು. ರಾಗ ಬಸಂತದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಇವರುಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು’ ಸಮಾಧಾನವಾಗಿರು ಮನವೇ ' ಸಿದ್ದಯ್ಯ ಪುರಾಣಿಕ್ ಅವರ" ಓದಿ ಬ್ರಾಹ್ಮಣನಾಗು' ಕನಕದಾಸರತೊರೆದು ಜೀವಿಸಬಹುದೇ’ ಮತ್ತು `ನನ್ನವ್ವ ಕಲ್ಲ ಬಿಡೆ’ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನವನ್ನು ತಣಿಸಿದರು. ಇವರಿಗೆ ಪ್ರಸಾದ್ ಕುಲಕರ್ಣಿ ತಬಲಾ ಸಾಥ್ ಮತ್ತು ಚಂದ್ರಶೇಖರ್ ಆಲೂರ್ , ಹಾರ್ಮೋನಿಯಂ ಸಾಥ್ ನೀಡಿದರು. ಕುಮಾರಿ ಲಕ್ಷ್ಮಿ ಕುಲಕರ್ಣಿ ಮತ್ತು ವೈಷ್ಣವಿ ಜಾಡಗೌಡ ಇವರ ಭರತನಾಟ್ಯವು ಸಹ ನೆರೆದ ಪ್ರೇಕ್ಷಕರನ್ನು ಸಂತಸಗೊಳಿಸಿತು.


ಬಳಗದ ಅಧ್ಯಕ್ಷ ಜೆ. ದಾಜೀಬಾ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗವು ಕಳೆದ 15 ವರ್ಷಗಳಿಂದ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಗೌರವಾಧ್ಯಕ್ಷ ಡಿ.ಎಂ.ಫೈಲ್, ಅಶೋಕ ನಾಗಠಾಣ, ಎಸ್.ಎ.ಭರಮಗೌಡರ, ಶಾರದಾ ಪಾಟೀಲ, ಅನುಸೂಯಾ ಹೊಸಮನೆ, ಡಾ.ಪ್ರಿಯದರ್ಶಿನಿ ಉಗಲವಾಟ, ವಿ.ಬಿ.ಪದಸಾಲಿಮನಿ, ಎ.ಎಸ್.ವಸ್ತ್ರದ, ಎಸ್.ಎಂ.ಹಿರೇಮಠ, ದೇವೇಂದ್ರ ಬಡಿಗೇರ ಉಪಸ್ಥಿತರಿದ್ದರು. ಭಾಗ್ಯ ಹಡಗಲಿ ಸ್ವಾಗತಿಸಿದರು. ಸುರೇಶ ಅರಳಿಮರ ವಂದಿಸಿದರು. ಜಯಶ್ರೀ ಆಲೂರ ನಿರೂಪಣೆ ಮಾಡಿದರು.