Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ಅರೇಬಿಕ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಮಾಣಪತ್ರ ಕೋರ್ಸಗಳ ಪ್ರಾರಂಭ

ಸಿಯುಕೆಯಲ್ಲಿ ಅರೇಬಿಕ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಮಾಣಪತ್ರ ಕೋರ್ಸಗಳ ಪ್ರಾರಂಭ

ಕಲಬುರಗಿ,ಮಾ.13-“ಪ್ರಸ್ತುತ ಬಹು-ಧ್ರುವೀಯ ಮತ್ತು ಬಹುಭಾಷಾ ಜಗತ್ತಿನಲ್ಲಿ ವ್ಯವಹಾರ, ಆರ್ಥಿಕತೆ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಂಹನ ನಡೆಸಲು ಹೊಸ ಭಾಷೆಯನ್ನು ಕಲಿಯುವುದು ಅತ್ಯಗತ್ಯವಾಗಿದೆ” ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಹೇಳಿದರು.
ಸಿಯುಕೆಯ ವಿದೇಶಿ ಭಾಷಾ ಅಧ್ಯಯನ ವಿಭಾಗವು ಆಯೋಜಿಸಿದ್ದ ಇಂದಿನ ಸಂದರ್ಭದಲ್ಲಿ ವಿದೇಶಿ ಭಾಷೆಯನ್ನು ಕಲಿಯುವ ಮಾರ್ಗಗಳು ಮತ್ತು ಅವಕಾಶಗಳು ಎಂಬ ಒಂದು ದಿನದ ವೆಬಿನಾರ್ ಅನ್ನು ನಿನ್ನೆ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು. 2025- 26ರ ಶೈಕ್ಷಣಿಕ ವರ್ಷದಲ್ಲಿ ವಿದೇಶಿ ಭಾಷಾ ವಿಭಾಗವು ಅರೇಬಿಕ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಮಾಣಪತ್ರ ಕೋರ್ಸಗಳ ಪ್ರಾರಂಭದ ಅಂಗವಾಗಿ ಈ ವೆಬಿನಾರನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಇತರ ವೃತ್ತಿಪರರು ಸೇರಿದಂತೆ ಆಸಕ್ತರೆಲ್ಲರೂ ಹೊಸ ವಿದೇಶಿ ಭಾಷೆಯನ್ನು ಕಲಿಯಲು ಅನುಕೂಲವಾಗುವಂತೆ ಈ ಕೋರ್ಸಗಳನ್ನು ಪ್ರಾರಂಭಿಸಲಾಗಿದೆ. ಪೆÇ್ರ. ಬಿರಾದಾರ್ ಮತ್ತಷ್ಟು ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಹೊಸ ವಿದೇಶಿ ಭಾಷೆಗಳನ್ನು ಕಲಿಯಲು ಕೆಲವೇ ವಿಶ್ವಾಸಾರ್ಹ ಮಾರ್ಗಗಳಿವೆ. ಈ ನಿಟ್ಟಿನಲ್ಲಿ ಅರೇಬಿಕ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಕಾರ್ಯನಿರ್ವಾಹಕ ಪ್ರಮಾಣಪತ್ರ ಕೋರ್ಸಗಳನ್ನು ಪ್ರಾರಂಭಿಸುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಇದು ನಮ್ಮ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪೆÇ್ರ. ವಿಕ್ರಮ್ ವಿಸಾಜಿ ಮಾತನಾಡಿ &quoಣ;ವಿದೇಶಿ ಭಾಷಾ ಅಧ್ಯಯನ ವಿಭಾಗವು ಯಾವಾಗಲೂ ಹೊಸ ಕೋರ್ಸ್‍ಗಳನ್ನು ನೀಡಲು ಶ್ರಮಿಸುತ್ತಿದೆ ಮತ್ತು ಹೊಸ ವಿದೇಶಿ ಭಾಷೆಗಳ ಕಲಿಕೆಯು ಹೊಸ ಸಂಸ್ಕøತಿ ಜ್ಞಾನದ ಬಾಗಿಲುಗಳನ್ನು ತೆರೆಯುತ್ತದೆ, ಇದರಿಂದಾಗಿ ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ನಮ್ಮ ತಿಳುವಳಿಕೆಯನ್ನು ಶ್ರೀಮಂತಗೊಳಿಸುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು ವೆಬಿನಾರ್‍ನಲ್ಲಿ, ವಿದೇಶಿ ಭಾಷಾ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಪಿ.ಕುಮಾರ ಮಂಗಲಂ ಅವರು ಎಲ್ಲರನ್ನು ಸ್ವಾಗತಿಸಿದರು ಮತ್ತು ವೆಬಿನಾರ್‍ನ ವಿಷಯದ ಬಗ್ಗೆ ವಿವರಿಸಿದರು. ಅವರು ಮಾತನಾಡಿ &quoಣ;ಅರೇಬಿಕ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಕಾರ್ಯನಿರ್ವಾಹಕ ಪ್ರಮಾಣಪತ್ರ ಕೋರ್ಸ್‍ಗಳನ್ನು ಆನ್‍ಲೈನ್ ತರಗತಿಗಳ ಮೂಲಕ ನೀಡುತ್ತಿದೆ. ಈ ಕೋರ್ಸ್‍ಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ವೃತ್ತಿಪರ ಬೆಳವಣಿಗೆಗೆ ಹೊಸ ಮತ್ತು ಉತ್ತಮ ಅವಕಾಶಗಳನ್ನು ನೀಡುತ್ತದೆ&quoಣ; ಎಂದು ಹೇಳಿದರು.
ಕೇರಳದ ಕರುವರಕುಂಡುವಿನ ಕೆಟಿಎಂ ಕಾಲೇಜ್ ಆಫ್ ಅಡ್ವಾನ್ಸ್‍ಡ್ ಸ್ಟಡೀಸ್‍ನ ಅರೇಬಿಕ್ ತಜ್ಞ ಡಾ. ಮುಹಮ್ಮದ್ ಅಸ್ಲಾಂ ಇ.ಕೆ., ನವದೆಹಲಿಯ ಜೆಎನ್‍ಯುನ ಜಪಾನೀಸ್ ಅಧ್ಯಯನ ಕೇಂದ್ರದ ಜಪಾನೀಸ್ ತಜ್ಞ ಡಾ. ಜನಶೃತಿ ಚಂದ್ರ ಮತ್ತು ಡೆಹ್ರಾಡೂನ್‍ನ ಡೂನ್ ವಿಶ್ವವಿದ್ಯಾಲಯದ ಸ್ಪ್ಯಾನಿಷ್ ಅಧ್ಯಯನ ವಿಭಾಗದ ಸ್ಪ್ಯಾನಿಷ್ ತಜ್ಞ ಡಾ. ಸ್ವಾಗತ ಬಸು ಅವರು ಪ್ರಸ್ತುತ ಸಂದರ್ಭದಲ್ಲಿ ಆಯಾ ಭಾಷೆಗಳ ಪ್ರಾಮುಖ್ಯತೆ ಮತ್ತು ವೃತ್ತಿ
ಅವಕಾಶಗಳ ಕುರಿತು ಮಾತನಾಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜಪಾನೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿಯಾಲಿ ರಾಯ್ ಅವರು ವಂದಿಸಿದರು. ಅರೇಬಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಇನಾಮುಲ್ ಆಜಾದ್ ಮತ್ತು ಜರ್ಮನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಂ ಮಿಶ್ರಾ ಉಪಸ್ಥಿತರಿದ್ದರು.