ಅತ್ಯಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಸಿಇಒ ಭೇಟಿ, ಮಕ್ಕಳಿಗೆ ಮಾರ್ಗದರ್ಶನ

ಕಲಬುರಗಿ,ಫೆ.6-ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಪಡಿಸಲು ಎಸ್.ಎಸ್.ಎಲ್.ಸಿ ಪೂರ್ವಸಿದ್ದತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಮಾಡಬೂಳ ಕರ್ನಾಟಕ ಪಬ್ಲಿಕ ಶಾಲೆ ,ಪೇಠಶಿರೂರ ಸರಕಾರಿ ಪ್ರೌಢಶಾಲೆ , ಶಹಾಬಾದ ಬಾಲಕರ ಪ್ರೌಢಶಾಲೆ ಹಾಗೂ ಮರತೂರ ಸರಕಾರಿ ಪ್ರೌಢಶಾಲೆಗೆ ಸಂದರ್ಶನ ನೀಡಿ ಎಸ್.ಎಸ್.ಎಲ್.ಸಿ ಫಲಿತಾಂಶ 1 ಕಡಿಮೆ ಬರಲು ಕಾರಣ ಮತ್ತು ಫಲಿತಾಂಶ ಹೆಚ್ಚಳ ಮಾಡಲು ಅಗತ್ಯ ಸಲಹೆ ನೀಡಿ ಮಕ್ಕಳೊಂದಿಗೆ ಮಾತನಾಡಿ ಯಾವ ವಿಷಯದಲ್ಲಿ ಕಲಿಕೆಗೆ ತೊಂದರೆ ಕುರಿತು ಚರ್ಚಿಸಿದರು ಹಾಗೂ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಅರಿವೆ ಗುರು ಎಂಬ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಒಳಗೊಂಡ ಪುಸ್ತಕ ಅದರ ಬಳಕೆ ಮತ್ತು ಅಗತ್ಯತೆ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಿದರು.
ಶಹಾಬಾದ ಹಾಗೂ ಮರತೂರ ಶಾಲೆಯಲ್ಲಿ ಬಿಸಿಯೂಟ ಸಿದ್ದತೆ ಪರಿಶೀಲಿಸಿ ಆಹಾರಧಾನ್ಯಗಳ ಗುಣಮಟ್ಟ ಪರಿಶೀಲಿಸಿ ಸರಕಾರಿ ಪ್ರೌಢಶಾಲೆ ಮರತೂರಲ್ಲಿ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಮಾಡಿದರು.ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ನೀಡುವ ಬಗ್ಗೆ ವಿಚಾರಿಸಿದರು ಹಾಗೂ ಮೊಟ್ಟೆ ತಿನ್ನದೆ ಇರುವ ಮಕ್ಕಳಿಗೆ ಮೊಟ್ಟೆಯ ಪೌಷ್ಟಿಕಾಂಶ ಬಗ್ಗೆ ತಿಳಿ ಹೇಳಿದರು.