
೩,೪೨೭ ಕೋಟಿ ಅಂದಾಜು ವೆಚ್ಚ
ಬೆಂಗಳೂರು,ಮಾ. ೨೭.- ಬೆಂಗಳೂರು ಕೇಂದ್ರ ಪಾಲಿಕೆ ಬಜೆಟ್: ಮಾನವೀಯತೆ ಆಧುನಿಕತೆ ಸೇರ್ಪಡೆ..
ಬೈಕ್ ಆಂಬ್ಯುಲೆನ್ಸ್, ಹೈಟೆಕ್ ವರ್ಚುವಲ್ ಕ್ಲಿನಿಕ್‌ಗಳು, ವಿಶೇಷಚೇತನ ಮಕ್ಕಳಿಗಾಗಿ ವಾತ್ಸಲ್ಯ ಮನೆ ಹಾಗೂ ಆಸರೆಯಿಲ್ಲದ ಹಿರಿಯರಿಗೆ “ಹಿರಿಯರ ವಾಡಿ” ನಿರ್ಮಾಣದಂತಹ ಮಾನವೀಯ ಯೋಜನೆಗಳಿಗೆ ಒತ್ತು ನೀಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಚೊಚ್ಚಲ ಬಜೆಟ್ ಮಂಡಿಸಲಾಗಿದೆ.
ಪುರಭವನದಲ್ಲಿ ಆಯುಕ್ತ ರಾಜೇಂದ್ರ ಚೋಳನ್ ಅವರು ಬಜೆಟ್ ಮಂಡಿಸಿ ಒಟ್ಟು ೩,೪೨೭ ಕೋಟಿ ಅಂದಾಜು ವೆಚ್ಚ ಹೊಂದಿದ್ದು, ೭೮.೬೫ ಲಕ್ಷ ಮಿಗತೆ ಉಳಿಕೆ ಮೂಲಕ ಆರ್ಥಿಕ ಶಿಸ್ತಿಗೆ ಈ ಬಜೆಟ್ ಉದಾಹರಣೆ ಎಂದರು.
- “ಜೀವಂತ ಬಜೆಟ್” ಆಯುಕ್ತರ ವಿವರಣೆ
ಈ ಬಜೆಟ್ ಕೇವಲ ಅಂಕಿ-ಅಂಶಗಳಿಗೆ ಸೀಮಿತವಲ್ಲದೆ, ನಾಡಪ್ರಭು ಕೆಂಪೇಗೌಡರ ಪರಂಪರೆ ಮತ್ತು ಎಐ ಆಧಾರಿತ ಆಧುನಿಕತೆ ನಡುವಿನ ಸೇತುವೆಯಾಗಿದೆ ಎಂದು ಹೇಳಿದರು.
ಇ-ಖಾತಾ ವ್ಯವಸ್ಥೆ, ರಸ್ತೆಗುಂಡಿ ಮುಕ್ತ ನಗರ ಗುರಿ ಹಾಗೂ ಡಿಜಿಟಲ್ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. - ಆರೋಗ್ಯ ಮತ್ತು ಮಾನವೀಯ ಯೋಜನೆಗಳು
ಟ್ರಾಫಿಕ್‌ನಲ್ಲೂ ತ್ವರಿತ ಸೇವೆಗೆ ಬೈಕ್ ಆಂಬ್ಯುಲೆನ್ಸ್
೨೨ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳು
೨೮ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ
ಬಡಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ
ವಿಶೇಷಚೇತನ ಮಕ್ಕಳಿಗೆ “ವಾತ್ಸಲ್ಯ ಮನೆ”
ಹಿರಿಯರಿಗೆ “ಹಿರಿಯರ ವಾಡಿ” ವಸತಿ - ಮೂಲಸೌಕರ್ಯ ಅಭಿವೃದ್ಧಿ
೨೧೭.೫೦ ಕೋಟಿ ವೆಚ್ಚದಲ್ಲಿ ೧೪೫ ಕಿಮೀ ಪ್ರಮುಖ ರಸ್ತೆ ಅಭಿವೃದ್ಧಿ
೨೦೦ ಕೋಟಿ ವೆಚ್ಚದಲ್ಲಿ ೧೧೫ ಕಿಮೀ ವಾರ್ಡ್ ರಸ್ತೆಗಳು
೧೨ ಟ್ರಾಫಿಕ್ ಜಂಕ್ಷನ್ ಸುಧಾರಣೆ
೫೦ ಕಿಮೀ ಪಾದಚಾರಿ ಮಾರ್ಗ ಸುಧಾರಣೆ
೯ ಹೊಸ ಪಾದಚಾರಿ ಮೇಲೇತುವೆಗಳು - ಪರಿಸರ ಮತ್ತು ನಗರ ಸೌಂದರ್ಯ
ಬ್ಲೂ-ಗ್ರೀನ್ ಕಾರಿಡಾರ್‌ಗಳು
೫೦,೦೦೦ ಸಸಿ ನೆಡುವ ಯೋಜನೆ
ಹಲಸೂರು ಕೆರೆ ಅಭಿವೃದ್ಧಿಗೆ ೮೨ ಕೋಟಿ
೨೧೫ ಉದ್ಯಾನವನಗಳ ಅಭಿವೃದ್ಧಿ
ಐಇಆ ದೀಪಗಳಿಂದ ೬೦% ವಿದ್ಯುತ್ ಉಳಿತಾಯ - ಆದಾಯ ಮತ್ತು ಆಸ್ತಿ ನಿರ್ವಹಣೆ
ತೆರಿಗೆ ಗುರಿ: -೧,೧೫೦ ಕೋಟಿ
ಪಾಲಿಕೆ ಆಸ್ತಿಗಳಿಂದ ೫೮ ಕೋಟಿ ಬಾಡಿಗೆ
೧೧೨ ಮಾರುಕಟ್ಟೆಗಳ ಮಳಿಗೆಗಳಿಂದ ೨೫ ಕೋಟಿ ಆದಾಯ
ರಸೆಲ್ ಮಾರುಕಟ್ಟೆ ಅಭಿವೃದ್ಧಿಗೆ ೭೦ ಕೋಟಿ - ನಗರ ಸೇವೆಗಳು
ಘನತ್ಯಾಜ್ಯ ನಿರ್ವಹಣೆಗೆ ೨೧೫ ಕೋಟಿ
೬೦ ಸಾರ್ವಜನಿಕ ಶೌಚಾಲಯಗಳು, ೨೦ ಶೀ-ಟಾಯ್ಲೆಟ್
ಪೌರಕಾರ್ಮಿಕರಿಗೆ ಮಸ್ಟರಿಂಗ್ & ಸುವಿಧಾ ಕೇಂದ್ರಗಳು - ಸಮಾಜ ಕಲ್ಯಾಣ
೫೦೦ ಮನೆಗಳ ನಿರ್ಮಾಣ
ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಯೂನಿಫಾರ್ಮ್
ಲ್ಯಾಪ್‌ಟ್ಯಾಪ್ ವಿತರಣೆ
ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ
ನಿರುದ್ಯೋಗಿಗಳಿಗೆ ಸಹಾಯಧನ - ವಿಶೇಷ ಅಂಶ
ಈ ಬಜೆಟ್‌ನಲ್ಲಿ ೧,೭೬೦ ಕೋಟಿ ಸಾರ್ವಜನಿಕ ಕಾಮಗಾರಿಗಳಿಗೆ ಮೀಸಲಿಟ್ಟು, ನಗರ ಅಭಿವೃದ್ಧಿಗೆ ಮಹತ್ವದ ಒತ್ತು ನೀಡಲಾಗಿದೆ.
ಒಟ್ಟಿನಲ್ಲಿ, ಈ ಬಜೆಟ್ “ಕಾಂಕ್ರೀಟ್ ನಗರಕ್ಕೆ ಮಾನವೀಯ ಸ್ಪರ್ಶ ನೀಡುವ” ಹಾಗೂ ನಾಗರಿಕರ ದೈನಂದಿನ ಬದುಕು ಸುಧಾರಿಸುವ ದಿಕ್ಕಿನಲ್ಲಿ ರೂಪುಗೊಂಡಿದೆ.






























