
ಚೇಳೂರು, ಮಾ. ೧೪- ಇರಾನ್ ದೇಶದಲ್ಲಿ ಯುದ್ದ ನಡೆಯುತ್ತಿರುವುದರಿಂದ ಇಡೀ ರಾಜ್ಯಕ್ಕೆ ಪೆಟ್ರೋಲ್, ಡೀಸೆಲ್ ಎಪೆಕ್ವ್ ಆಗುತ್ತಿದೆ. ನಮಗೆ ರಷ್ಯಾದಿಂದ ಪೆಟ್ರೋಲ್, ಡೀಸೆಲ್ ಕೇಂದ್ರ ಸರ್ಕಾರ ೩೦ ಲಕ್ಷ ಟನ್ ತರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕರ್ನಾಟಕಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು, ಸಿಂಗೋನಹಳ್ಳಿ ಗೊಲ್ಲರಹಟ್ಟಿ, ತಗ್ಗಿಹಳ್ಳಿ ಅಡಗೂರು ಭಾಗಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಲಿಂಡರ್ ವ್ಯವಸ್ಥೆ ಕೂಡಾ ಸ್ವಲ್ಪ ಬೇಡಿಕೆ ಇದೆ. ಅದು ಮುಂದಿನ ದಿನಗಳಲ್ಲಿ ಸರಿಯಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಬಸ್ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು ಈ ಭಾರಿ ಗುಬ್ಬಿಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ. ಈಗಾಗಲೇ ಬಿಇಓ ಮತ್ತು ಶಿಕ್ಷಕರಿಗೂ ತಿಳಿಸಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಯಾವುದೇ ಹಳ್ಖಿಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳಬೇಕು ಎಂದು ಆಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸುರೇಶ್, ಶ್ರೀನಿವಾಸ್, ಗಂಗಾಧರ್, ಚನ್ನಬಸವೇಗೌಡ, ಕರೀತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.






























