Home ಮುಖಪುಟ ಸುದ್ದಿ ದೇಶಾದ್ಯಂತ ಜನಗಣತಿ ಕಾರ್ಯಕ್ಕೆ ಚಾಲನೆ

ದೇಶಾದ್ಯಂತ ಜನಗಣತಿ ಕಾರ್ಯಕ್ಕೆ ಚಾಲನೆ

ನವದೆಹಲಿ,ಏ.೧- ದೇಶಾದ್ಯಂತ ಇಂದಿನಿಂದ ಜನಗಣತಿ ಜೊತೆಗೆ ಜಾತಿಗಣತಿ ಕಾರ್ಯ ಆರಂಭವಾಗಿದ್ದು ಮೊದಲ ಹಂತ ಸೆಪ್ಟಂಬರ್ ೩೦ರ ತನಕ ನಡೆಯಲಿದೆ, ಈ ಅವಧಿಯಲ್ಲಿ ಮನೆ ಪಟ್ಟಿ ನಡೆಯಲಿದೆ. ಬಳಿಕ ಜನಗಣತಿ ನಡೆಯಲಿದ್ದು ೩೩ ಪ್ರಶ್ನೆಗಳನ್ನು ಕೇಂದ್ರ ಗೃಹ ಸಚಿವಾಲಯ ಸಿದ್ದಪಡಿಸಿದ್ದು ಎಲ್ಲಾ ರಾಜ್ಯಗಳು ಮತ್ತು
ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾಡಳಿತಗಳು ಸಕಲ ಸಿದ್ದತೆ ಮಾಡಿಕೊಂಡಿವೆ.


ಏಪ್ರಿಲ್ ೧ ರಿಂದ ಸೆಪ್ಟೆಂಬರ್ ೩೦ ರವರೆಗೆ ನಡೆಯಲಿರುವ ಮೊದಲ ಹಂತದ ಗಣತಿ ಕಾರ್ಯಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ೩೦ ದಿನಗಳ ಅವಧಿಯಲ್ಲಿ ನಡೆಸುತ್ತದೆ. ಎರಡನೇ ಹಂರ ಮುಂದಿನ ವರ್ಷ ಮಾರ್ಚ್ ೧ ರಿಂದ ನಡೆಯಲಿದ್ದು ಜನಗಣತಿ. ಜೊತೆಗೆ ಜಾತಿ ಗಣತಿ ನಡೆಯಲಿದೆ


ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯ ನಡೆಯಲಿದ್ದು ಮುಂದಿನ ಹಂತಕ್ಕೆ ಡೇಟಾ ಸಂಗ್ರಹಕ್ಕೆ ಸಹಕಾರಿಯಾಗಲಿದೆ ಮನೆ ಪಟ್ಟಿ ಬಳಿಕ ಜನಗಣತಿ ನಡೆಯಲಿದೆ. ಈ ಅವಧಿಯಲ್ಲಿ ಜನರು ೩೩ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ. ಈ ಪ್ರಶ್ನೆಗಳಲ್ಲಿ ಮನೆ, ಜೀವನ ಪರಿಸ್ಥಿತಿ ಮತ್ತು ಮೂಲಭೂತ ಸೌಕರ್ಯಗಳ ಸೇರಿದಂತೆ ಹಲವು ಪ್ರಶ್ನೆಗಳನ್ನು ಒಳಗೊಂಡಿದೆ.


ಜನಗಣತಿ ಮತ್ತು ಜಾತಿಗಣತಿಯ ಸಮಯದಲ್ಲಿ ಜನರು ನೀಡುವ ಪ್ರತಿಯೊಂದು ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಈ ಮಾಹಿತಿಯನ್ನು ಆದಾಯ ತೆರಿಗೆ ಅಥವಾ ಸರ್ಕಾರದ ಯಾವುದೇ ಸಂಸ್ಥೆಗಳಿಗೆ ನೀಡುವುದಿಲ್ಲ, ಹೀಗಾಗಿ ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಭಾರತೀಯ ಜನಗಣತಿ ಆಯುಕ್ತಾಲಯ ಮಾಹಿತಿ ಹಂಚಿಕೊಂಡಿದೆ.

ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮಾತನಾಡಿ, ಜನಗಣತಿ ಸಂದರ್ಭದಲ್ಲಿ ಕುಟುಂಬದಲ್ಲಿ ವಾಸಿಸುವ ಜನರ ಸಂಖ್ಯೆ, ಕಟ್ಟಡದ ಮಾಲೀಕತ್ವದ ವಿವರ, ಮನೆಯಲ್ಲಿ ಕೊಠಡಿಗಳ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದಿದ್ಧಾರೆ

ಜೊತೆಗೆ ಕುಡಿಯುವ ನೀರಿನ ಲಭ್ಯತೆ ಮತ್ತು ಮುಖ್ಯ ಮೂಲ, ಲಭ್ಯವಿದ್ದರೆ ಅದರ ಬಗ್ಗೆ ಮತ್ತು, ವಿದ್ಯುತ್ ಮೂಲ, ಶೌಚಾಲಯದ ಪ್ರವೇಶ ಮತ್ತು ತ್ಯಾಜ್ಯ ನಿರ್ವಹಣೆ, ಹಾಗೆಯೇ ಪ್ರಾಥಮಿಕ ಅಡುಗೆ ಇಂಧನವಾಗಿ ಬಳಸುವ ಅನಿಲ ಸಂಪರ್ಕಗಳ ಪ್ರಕಾರ ಸೇರಿದಂತೆ ಸೌಲಭ್ಯಗಳ ಬಗ್ಗೆಯೂ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಹೇಳೀದ್ದಾರೆ

ಜನರು ರೇಡಿಯೋಗಳು ಅಥವಾ ದೂರದರ್ಶನಗಳಂತಹ ವಸ್ತು ಹೊಂದಿದ್ದಾರೆಯೇ, ಅವರ ಇಂಟರ್ನೆಟ್ ಸೌಲಭ್ಯ ಕಂಪ್ಯೂಟರ್‍ಗಳು, ಮೊಬೈಲ್ ಫೊ?ನ್ ಹೊಂದಿದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತುದೆ, ಮತ್ತು ನೋಂದಾಯಿತ ನಾಲ್ಕು ಅಥವಾ ದ್ವಿಚಕ್ರ ವಾಹನಗಳ ಬಗ್ಗೆಯೂ ಕೇಳಲಾಗುತ್ತದೆ. ಜೊತೆಗೆ ೧೬ ಭಾಷೆಗಳಲ್ಲಿ ಲಭ್ಯವಿರುವ ಫಾರ್ಮ್‌ಗಳ ಮೂಲಕವೂ ಉತ್ತರಗಳನ್ನು ಸಲ್ಲಿಸಬಹುದಾಗಿದೆ ಎಂದಿದ್ಧಾರೆ


೩೦ ಲಕ್ಷ ಗಣತಿದಾರರು


ಜನಗಣತಿ ಕಾರ್ಯಕ್ಕೆ ದೇಶಾದ್ಯಂತ ೩೦ ಲಕ್ಷಕ್ಕೂ ಅಧಿಕ ಗಣತಿದಾರರನ್ನು ಬಳಸಿಕೊಳ್ಳಲಾಗಿದೆ. ಸರಿ ಸುಮಾರು ೧೨ ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ


ಅಂದಾಜು ೩೦ ಲಕ್ಷ ಜನಗಣತಿ ನಿರ್ವಾಹಕರು ವಿಶೇಷವಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಫೊ?ನ್ ಅಪ್ಲಿಕೇಶನ್‌ಗಳನ್ನು ಬಳಸಇ ಗಣತಿ ಮಾಡಲಿದ್ದಾರೆ. ಐಫೊ?ನ್‌ಗಳು ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಲಭ್ಯವಿದೆ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸಬಹುದಾಗಿದೆ. ಎಲ್ಲಾ ಮಾಹಿತಿ ಗೌಪ್ಯವಾಗಿಡಲಾಗುತ್ತಿದೆ ಎಂದು ತಿಳಿಸಿದೆ.


ಮಾರ್ಚ್ ೧ ರಿಂದ ಎರಡನೇ ಹಂತ

ಮೊದಲ ಹಂತ ಇಂದಿನಿಂದ ಸೆಪ್ಟಂಬರ್ ೩೦ರ ತನಕ ನಡೆಯಲಿದ್ದು ಎರಡೇ ಹಂತದ ಗಣತಿ ಕಾರ್ಯ ೨೦೨೭ರ ಮಾರ್ಚ್ ೧ ರಿಂದ ನಡೆಯಲಿದೆ ಎಂದು ಭಾರತೀಯ ಜನಗಣತಿ ಆಯುಕ್ತಾಲಯ ಮಾಹಿತಿ ನೀಡಿದೆ.

ಮೊದಲ ಹಂತ ಮುಕ್ತಾಯವಾದ ನಂತರ ಈ ವರ್ಷದ ಅಕ್ಟೋಬರ್ ತಿಂಗಳಿಂದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಹಿಮದಿಂದ ಆವೃತವಾದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗಣತಿ ನಡೆಯಲಿದೆ

ಈ ಹಂತದಲ್ಲಿ ವ್ಯಕ್ತಿಯ ಜಾತಿ ಮತ್ತು ಉಪ-ಜಾತಿಯ ಬಗ್ಗೆ ಪ್ರಶ್ನೆಗಳಿರುತ್ತವೆ. ಜಾತಿ ಎಣಿಕೆ ಕಾರ್ಯ ನಡೆಯಲಿದೆ. ಐತಿಹಾಸಿಕವಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಲನಶೀಲತೆ ರೂಪಿಸಿದೆ, ಜಾತಿ ದತ್ತಾಂಶ ಜನಸಂಖ್ಯಾ ವಿತರಣೆ, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ವಿವಿಧ ಜಾತಿ ಗುಂಪುಗಳ ಪ್ರಾತಿನಿಧ್ಯದ ಬಗ್ಗೆ ಒಳನೋಟ ಒಳಗೊಂಡಿದೆ ಎಂದು ಹೇಳಲಾಗಿದೆ