Home ಜಿಲ್ಲೆ ಕಲಬುರಗಿ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಣೆ

ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಣೆ

ಚಿತ್ತಾಪುರ:ಮಾ.23:ಪಟ್ಟಣದ ಹಟಗಾರ ಸಮಾಜದ ವತಿಯಿಂದ ಇಲ್ಲಿನ ಶ್ರೀ ಚೌಡಮ್ಮ ದೇವಸ್ಥಾನದಲ್ಲಿ 11ನೇ ಶತಮಾನದ ಆದ್ಯ ವಚನಕಾರ, ಶಿವಶರಣ ದೇವರ ದಾಸಿಮಯ್ಯನವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿ-ಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಹಟಗಾರ ಸಮಾಜದ ಅಧ್ಯಕ್ಷರಾದ ಬಸವರಾಜ ರಾಜೋಳ್ಳಿ ಅವರು ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ವಚನ ಸಾಹಿತ್ಯಕ್ಕೆ ಭದ್ರ ಅಡಿಪಾಯ ಹಾಕಿದ ದಾಸಿಮಯ್ಯನವರ

‘ರಾಮನಾಥ ‘ ಅಂಕಿತನಾಮದ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ನೇಯ್ಗೆ ಕಾಯಕದ ಮೂಲಕವೇ ಕೈಲಾಸ ಕಂಡ ದಾಸಿಮಯ್ಯನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಟಗಾರ ಸಮಾಜದ ಪ್ರಮುಖ ಮುಖಂಡರಾದ ರಾಚಣ್ಣ ವೈಕುಂಠ, ವಾಸುದೇವ ಗಂಜಿ, ಬಸವರಾಜ ಖ್ಯಾಲಾ, ರಾಚಣ್ಣ ಕಾಳಗಿ, ರಾಜಶೇಖರ ಬಳ್ಳಾ, ಚೆನ್ನಪ್ಪ ಜಾಡರ, ಅಯ್ಯಣ್ಣ ಅಲ್ಲಮ, ಶಿವಕುಮಾರ ಶೀಲವಂತ ಹಾಗೂ ರಾಜು ಮದಗುಂಟಿ ಸೇರಿದಂತೆ ಸಮಾಜದ ಹಿರಿಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತಿಯನ್ನು ಯಶಸ್ವಿಗೊಳಿಸಿದರು.