
ಕಲಬುರಗಿ,ಅ.21-ಇಲ್ಲಿನ ಜಯನಗರದ ಎದರುಗಡೆಯ ಅಣ್ಣೆಮ್ಮ ನಗರದಲ್ಲಿರುವ ಸನ್ ರೈಸ್ ಆಂಗ್ಲ್ ಮಾಧ್ಯಮ ಶಾಲೆಯ ಮುಂದುಗಡೆಯ ಗೇಟ್‍ಗೆ ಅಳವಡಿಸಿದ್ದ 5 ಸಾವಿರ ರೂ.ಮೌಲ್ಯದ 1 ಸಿಸಿಟಿವಿ ಕ್ಯಾಮೆರಾವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಶಾಲೆಯ ಅಧ್ಯಕ್ಷರಾದ ಮಲ್ಲಿನಾಥ ಸಾಹು ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.